ಯುವಕನ ಕೊಲೆ ಕಾರು, ಬೈಕ್ ವಶ
ಮಂಜೇಶ್ವರ , ಡಿ.15 : ಯೂತ್ ಲೀಗ್ ಕಾರ್ಯಕರ್ತ ಪೊವ್ವಲ್ ನಿವಾಸಿ ಎಂ.ಕೆ.ಅಬ್ದುಲ್ ಖಾದರ್ (20)ರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿ ಸಂಚರಿಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಸೆರೆಗೀಡಾದಅಶ್ರಫ್ ಎಂಬಾತನ ಆಲ್ಟೋ ಕಾರನ್ನು ವಶಪಡಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಮುಖ್ಯಆರೋಪಿ ಮೊದಲಪ್ಪಾರೆಯ ನಸೀರ್ ಕರ್ನಾಟಕಕ್ಕೆ ಪಲಾಯನಗೈಯ್ಯಲು ಈ ಕಾರನ್ನು ಬಳಸಲಾಗಿತ್ತು. ಕೃತ್ಯದ ಬಳಿಕ ಅಮ್ಮಂಗೋಡಿಗೆ ತಲುಪಿದ ನಸೀರ್‌ನನ್ನು ಈ ಕಾರಿನಲ್ಲಿ ನೆಲ್ಲಿಕಟ್ಟೆಗೆ ತಲುಪಿಸಲಾಗಿದೆ.
ಅಲ್ಲಿ ರಕ್ತಸಿಕ್ತಗೊಂಡಿದ್ದ ತನ್ನ ಬಟ್ಟೆಬರೆಗಳನ್ನು ಬದಲಿಸಿದ ನಂತರ ಕತ್ತಿ ಹಾಗೂ ಬಟ್ಟೆಬರೆಯನ್ನು ಬದಿಯಡ್ಕದ ಕಾಡಿನಲ್ಲಿ ಎಸೆದು ಕರ್ನಾಟಕಕ್ಕೆ ಪಲಾಯನಗೈದಿದ್ದನು. ಈ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಆರೋಪಿಗಳು ಸಂಚರಿಸಿದ ಒಂದು ಬೈಕ್‌ನ್ನು ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದರು.
ಡಿ. 1ರಂದು ಅಬ್ದುಲ್ ಖಾದರ್‌ನ ಹತ್ಯೆ ನಡೆದಿದೆ. ಪ್ರಕರಣದಲ್ಲಿ ಮೊದಲಪ್ಪಾರೆ ನಿವಾಸಿನಸೀರ್,ಬೋವಿಕ್ಕಾನದಸಾಲಿ,ಪೊವ್ವಲ್‌ನ ಕಲಾಂ, ಅಶ್ರಫ್, ಫಾರೂಕ್ ಎಂಬಿವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಇವರು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.