ಡಿ.17ರಿಂದ ಬಜ್ಪೆ ಸುಂಕದಕಟ್ಟೆಯಲ್ಲಿ ತುಳುನಾಡ ಹಬ್ಬ

Update: 2016-12-15 15:06 GMT

ಮಂಗಳೂರು, ಡಿ.15: ಬಜ್ಪೆ -ಸುಂಕದಕಟ್ಟೆ ಶ್ರೀನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ 25ನೆ ವರ್ಷಾಚರಣೆಯ ಅಂಗವಾಗಿ ತುಳುನಾಡ ಹಬ್ಬ ಮತ್ತು ಕಾಲೇಜಿನ ವಾರ್ಷಿಕೋತ್ಸವ ಡಿ.17ರಿಂದ 19ರವರೆಗೆ ಕಾಲೇಜಿನ ಆವರಣದಲ್ಲಿ ಜರಗಲಿದೆ.

ಡಿ.17ರಂದು ಬೆಳಗ್ಗೆ 8:30ಕ್ಕೆ ತುಳುನಾಡ ಹಬ್ಬವನ್ನು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸುವರು.

ಸಂಸದ ನಳಿನ್‌ಕುಮಾರ್ ಕಟೀಲ್, ಶ್ರೀನಿರಂಜನ ಸ್ವಾಮಿ ವಿದ್ಯಾಸಂಸ್ಥೆಯ ಆಡಳಿತ ಟ್ರಸ್ಟಿ ನವೀನ್‌ಚಂದ್ರ ಡಿ. ಸುವರ್ಣ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಶಾಸಕ ಬಿ.ಎ. ಮೊಯ್ದಿನ್ ಬಾವ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಉಪಸ್ಥಿತರಿರುವರು.

ಡಿ.18ರಂದು ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಿ.19ರಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದೆ. ಡಿ.20ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.

ಡಿ.18 ರಂದು ತುಳುನಾಡ ಹಬ್ಬ-ಕ್ರೀಡಾಕೂಟವನ್ನು ಸಂದೀಪ್ ಶೆಟ್ಟಿ ಮರವೂರು ಉದ್ಘಾಟಿಸುವರು.

ಹಬ್ಬದ ಅಂಗವಾಗಿ ದೈವರಾಧನೆ,ತುಳು ನಾಟಕ ಮತ್ತು ಸಿನೆಮಾ, ಕೊಂಕಣಿ ಮತ್ತು ಬ್ಯಾರಿ ಕುರಿತ ಗೋಷ್ಠಿಗಳು, ತುಳುವರ ಸಾಗುವಳಿ ಬದುಕು, ಇಂದಿನ ತುಳು ಯಕ್ಷಗಾನ ಕುರಿತ ಚರ್ಚಾಕೂಟ, ತುಳುವರ ಮಾತೃ ಸಂಸ್ಕೃತಿಯಲ್ಲಿ ಸ್ತ್ರೀಯರ ಸ್ಥಾನಮಾನ, ತುಳುನಲಿಕೆ-ಪಾಡ್ದನ, ಪಾಡ್ದನ ಮೇಳ-ಗೀತಾ ಗಾಯನ, ತುಳು ನಾಟಕ ಆಟಿ ಕಳಂಜ, ತುಳು ಕವಿಗೋಷ್ಠಿ, ತುಳು ಭಾಷಾ ಮಾನ್ಯತೆ ಕುರಿತ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ, ಪ್ರಾಚ್ಯವಸ್ತುಗಳು, ಕರಕುಶಲ ವಸ್ತುಗಳು, ದೈವರಾಧನೆಯ ಸೊತ್ತುಗಳ ಪ್ರದರ್ಶನ ಮಳಿಗೆ, ತುಳು ಜಾನಪದೀಯ ಆಟಗಳನ್ನು ಹಮ್ಮಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News