ಬ್ರಾಹ್ಮಣ ಮಹಾಸಭಾದಿಂದ ಮಹಿಳಾ ದಿನಾಚರಣೆ

Update: 2016-12-15 15:11 GMT

ಉಡುಪಿ, ಡಿ.15: ಎಲ್ಲಾ ವಯೋಮಾನದ ಮಹಿಳೆಯರು ಸತತ ಯೋಗ ಸಾಧನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ತುಂಬು ಚಟುವಟಿಕೆಯಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಸುಧಾರಿಸಿಕೊಳ್ಳ ಬಹುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಆಚಾರ್ಯ ಹೇಳಿದ್ದಾರೆ.

  ಕೊಡವೂರು ಬ್ರಾಹ್ಮಣ ಮಹಾಸಭಾದ ವಿಂಶತಿ ವರ್ಷಾಚರಣೆಯ 16ನೆ ಕಾರ್ಯಕ್ರಮವಾಗಿ ಕೊಡವೂರು ವಿಪ್ರಶ್ರೀ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರ ಸ್ವಾಸ್ಥ್ಯ ಸಂಬಂಧಿ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಗಿರಿಜ ಬ್ರಹ್ಮಗಿರಿ ಹಳೆಯ ಸಂಪ್ರದಾಯಗಳ ಮಹತ್ವ ಹಾಗೂ ಆಚರಣೆ ಕುರಿತು ಮಾಹಿತಿ ನೀಡಿದರು.

ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಆಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಲೇಖಕಿ ಪೂರ್ಣಿಮಾ ಜನಾರ್ದನ್ ನಡೆಸಿ ಕೊಟ್ಟರು.

ಪ್ರೇಮಾ ಬಾಯರಿ, ಶ್ಯಾಮಲ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News