ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ
Update: 2016-12-15 22:57 IST
ಮಂಗಳೂರು, ಡಿ. 15: ಜೋಕಟ್ಟೆ ಗ್ರಾ.ಪಂ. ವ್ಯಾಪ್ತಿಯ ವಾಸುಮನೆ ಬಳಿ ನೂತನ ಕಾಂಕ್ರಿಟೀಕರಣ ರಸ್ತೆಗೆ ಶಾಸಕ ಅಭಯಚಂದ್ರ ಜೈನ್ ಗುದ್ದಲೆಪೂಜೆ ನೆರವೇರಿಸಿದರು. ಶಾಸಕರು ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಈ ನೂತನ ರಸ್ತೆ ಕಾಮಗಾರಿಗೆ 5 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಬಷೀರ್‌ಅಹ್ಮದ್, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸಿಲ್ಲ ಮೊಂತೆರೋ, ಉಪಾಧ್ಯಕ್ಷ ಶಂಶುದ್ದೀನ್, ಕೆಡಿಪಿ ನಾಮ ನಿರ್ದೇಶಕ ಸದಸ್ಯಜೆ. ಮುಹಮ್ಮದ್, ಗ್ರಾ.ಪಂ. ಸದಸ್ಯರಾದ ಮೊಹಿದಿನ್ ಶೆರಿಫ್, ಅಬೂಬಕರ್ ಬಾವ, ಅಬ್ದುಲ್ ಖಾದರ್, ಸ್ಥಳೀಯ ಮುಖಂಡ ಪದ್ನಾಬ ಮೊದಲಾದವರು ಉಪಸ್ಥಿತರಿದ್ದರು.