ಅನಧಿಕೃತ ಮರ ಸಾಗಾಟ: ಅಪರಾಧಿಗೆ ಸಜೆ, ದಂಡ

Update: 2016-12-15 18:42 GMT

ಮಂಜೇಶ್ವರ, ಡಿ.15: ಅನಧಿಕೃತವಾಗಿ ತೇಗದ ಮರ ಸಾಗಿಸಿದ ಪ್ರಕರಣದ ಅಪರಾಧಿಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 1 ವರ್ಷ ಸಜೆ ಮತ್ತು 1,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಅಡೂರು ವೆಳ್ಳಪ್ಪಾಡ್ ಹೌಸ್‌ನ ಹಸೈನಾರ್(36) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

 2007 ಜುಲೈ 28ರಂದು ಕುಂಟಾರಿನಲ್ಲಿ ಆದೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಲಾರಿಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 19ತುಂಡು ತೇಗದ ಮರ ವಶಪಡಿಸಿಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಹಸೈನಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News