ಭಟ್ಕಳ: ಬೀನಾ ವೈದ್ಯ ಶಾಲೆಯಲ್ಲಿ ಮಾರ್ಗದರ್ಶನ ಕಾರ್ಯಗಾರ
ಭಟ್ಕಳ , ಡಿ.16 : ತಾಲೂಕಿನ ಬೀನಾ ವೈದ್ಯ ಶಾಲೆಯಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಆಯೋಜಿಸಿದ್ದ ‘ವೈಜ್ಞಾನಿಕ ಕಲಿಕೆಯ ವಿಧಾನಗಳು ಮತ್ತು ಯಶಸ್ಸಿನ ಗುಟ್ಟು’ ಎಂಬ ಕಾರ್ಯಗಾರ ಜರಗಿತು.
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಶಾಸಕ ಮಂಕಾಳು ವೈದ್ಯ , ಶಿಕ್ಷಣದಿಂದ ವ್ಯಕ್ತಿಯ ಅಭಿವೃದ್ದಿ ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಮಕ್ಕಳ ಶಿಕ್ಷಣದ ಸರ್ವಾಂಗೀಣ ಅಭಿವೃದ್ದಿಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಡಾ.ಕೃಷ್ಣಪ್ರಸಾದ್, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಮನಸ್ಸು, ಕಲಿಯಬೇಕೆಂಬ ಛಲ ಇದ್ದರೆ ಎಂತಹ ವಿದ್ಯೆಂುನ್ನಾದರೂ ಕಲಿಯಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಮಾತನಾಡಿ, ಮಕ್ಕಳಲ್ಲಿರುವ ಕ್ರಿಯಾಶೀಲತೆಯನ್ನು ಬೆಳೆಸುವ ಪ್ರಯತ್ನ ನಡೆಯಬೇಕು ಎಂದರು.
ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳ ಸಂಪನ್ಮೂಲ ಶಿಕ್ಷಕರಿಂದ ವಿಶೇಷ ಮಾರ್ಗದರ್ಶನ ನೀಡಲಾಯಿತು.
ರವೀಂದ್ರ ಕಾಯ್ಕಿಣಿ ಸ್ವಾಗತಿಸಿದರು. ಹೇಮಾವತಿ ನಾಯ್ಕ ವಂದಿಸಿದರು. ಚಂದ್ರೇಶ್ವರ ಆಚಾರ್ಯ ನಿರೂಪಿಸಿದರು.