ಭಟ್ಕಳ : ಅಂಗನವಾಡಿ, ಬಿಸಿಯೂಟ ನೌಕರರಿಂದ ಸರಣಿ ಸತ್ಯಾಗ್ರಹ
Update: 2016-12-16 18:29 IST
ಭಟ್ಕಳ, ಡಿ.16 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ,ಆಶಾ,ಬಿಸಿಯೂಟ ನೌಕರರು ಡಿ.19ರಿಂದ 21ರವರೆಗೆ ಸರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಹಲವಾರು ವರ್ಷಗಳಿಂದ ಉದ್ಯೋಗ ಭದ್ರತೆ, ಕನಿಷ್ಟಕೂಲಿ, ಖಾಯಂಮಾತಿ, ಕಾನೂನುಬದ್ದ ಸವಲತ್ತಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಡಿ.19ರಿಂದ 21ರವರೆಗೆ ಮೂರೂ ದಿನ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ , ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು ಎಂದು ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಗೀತಾ ನಾಯ್ಕ,ಪುಷ್ಟಾವತಿ ನಾಯ್ಕ,ಸುಧಾ ಭಟ್,ನೇತ್ರಾವತಿ ನಾಯ್ಕ,ಲೀಲಾ ಆಚಾರ್ಯ,ಭವಾನಿ ನಾಯ್ಕ,ಚಂದ್ರಕಲಾ ನಾಯ್ಕ,ಕವಿತಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.