×
Ad

‘ಡಾಟಾ ಅನಲಿಟಿಕ್ಸ್- ಉದ್ಯೋಗ ಅವಕಾಶಗಳು’ ಕಾರ್ಯಾಗಾರ

Update: 2016-12-16 18:43 IST

ಉಡುಪಿ, ಡಿ.16:   ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ‘ ಡಾಟಾ ಅನಲಿಟಿಕ್ಸ್- ಉದ್ಯೋಗ ಅವಕಾಶಗಳು’ ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಕಾಲೇಜಿನ ಮಿನಿ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಅದಮಾರು ಮಠಾಧೀಶ ಶ್ರೀವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ತಾಂತ್ರಿಕ, ವೈದ್ಯಕೀಯ ಹಾಗೂ ಜೀವನಕ್ಕೆ ಭಾಷಾ, ಸಂಖ್ಯಾ ಶಾಸ್ತ್ರ ಎಂಬುದು ಅತಿ ಅಗತ್ಯವಾಗಿದೆ. ಯಾವುದೇ ಕೆಲಸಕ್ಕೂ ಇದು ಬಹಳ ಅಗತ್ಯ. ಆದುದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿನ ವಿಫುಲ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

 ಮುಖ್ಯ ಅತಿಥಿಗಳಾಗಿ ತಿರುಪತಿ ಇಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಏಜ್ಯುಕೇಶನ್‌ನ ಮಂಗಳೂರು ಮತ್ತು ಉಡುಪಿಯ ಕೇಂದ್ರೀಯ ನಿರ್ದೇಶಕ ಗಣೇಶ್ ಹೆಬ್ಬಾರ್, ಕಾಲೇಜಿನ ಆಡಳಿತ ಕಮಿಟಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಪ್ರಾಂಶು ಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿದ್ದರು.

ಸಂಖ್ಯಾಶಾಸ್ತ್ರದ ಮುಖ್ಯಸ್ಥ ಗೋಪಾಲ್ ಎಂ.ಗೋಖಾಲೆ ಸ್ವಾಗತಿಸಿದರು.

ಬೆಂಗಳೂರು ಡೆಲ್ ಅನಲಿಟಿಕ್ಸ್ ಗ್ರೂಪ್‌ನ ಹಿರಿಯ ವ್ಯವಸ್ಥಾಪಕ ಕುಲ್ದೀಪ್ ಡೋಂಗ್ರೆ, ಬೆಂಗಳೂರು ಜಿಇ ಗ್ಲೋಬಲ್ ಆಪರೇಶನ್ಸ್‌ನ ಡಾಟಾ ವಿಜ್ಞಾನಿ ಅನುಶ್ರೀ ಎಸ್.ವಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News