ಆಶಾ ನಿಲಯದಲ್ಲಿ ಕುಮಾರಸ್ವಾಮಿ ಹುಟ್ಟುಹಬ್ಬ
ಉಡುಪಿ, ಡಿ.16: ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳದ ಪದಾಧಿಕಾರಿಗಳು, ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 58ನೇ ಜನ್ಮದಿನವನ್ನು ಇಂದು ಮಿಷನ್ ಕಾಂಪೌಂಡನಲ್ಲಿರುವ ವಿಶೇಷ ಮಕ್ಕಳ ವಸತಿ ಶಾಲೆ ‘ಆಶಾ ನಿಲಯ’ದಲ್ಲಿ ವಿಶೇಷ ಮಕ್ಕಳ ನಡುವೆ ಆಚರಿಸಿದರು.
ನೆರೆದ ಮಕ್ಕಳನ್ನು ಸ್ವಾಗತಿಸಿ, ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಕೇಕ್‌ನ್ನು ಆಶಾ ನಿಲಯದ ಮಕ್ಕಳೊಂದಿಗೆ ಸೇರಿ ಕತ್ತರಿಸಿದ ಉಡುಪಿ ಜಿಲ್ಲಾ ಜೆಡಿಎಸ್‌ನ ನೂತನ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಕಾಪು, ಕೇಕ್‌ನ್ನು ಎಲ್ಲಾ ಮಕ್ಕಳಿಗೂ ನೀಡಿದರು.
ಈ ಪ್ರಯುಕ್ತ ಆಶಾ ನಿಲಯದ ಎಲ್ಲಾ ಮಕ್ಕಳಿಗೂ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಯಿತು.
ಪಕ್ಷದ ಹಿರಿಯ ನಾಯಕಿ ಶಾಲಿನಿ ಶೆಟ್ಟಿ ಕೆಂಚನೂರು, ವಾಸುದೇವ ರಾವ್, ಸುಧಾಕರ ಶೆಟ್ಟಿ ಹೆಜಮಾಡಿ, ಗಂಗಾಧರ ಬಿರ್ತಿ, ಜಯಕುಮಾರ್ ಪರ್ಕಳ, ಪ್ರದೀಪ್ ಜಿ., ಅಬ್ಬಾಸ್ ಅಲಿ, ಇಸ್ಮಾಯಿಲ್ ಪಲಿಮಾರು, ಇಕ್ಬಾಲ್ ಆತ್ರಾಡಿ, ದಿಲ್ಲೇಶ ಶೆಟ್ಟಿ, ಚಂದ್ರಹಾಸ ಶೆಟ್ಟಿ ಎರ್ಮಾಳ್, ವಿಶಾಲಾಕ್ಷಿ ಶೆಟ್ಟಿ, ಸೈಯದ್ ಸಾಯೀದ್ ಮುಂತಾದವರು ಉಪಸ್ಥಿತರಿದ್ದರು.