ಕಾರು, ಬೈಕ್ ಕಳವಿಗೆ ಯತ್ನ
Update: 2016-12-16 21:10 IST
ಉಡುಪಿ, ಡಿ.16: ಕಾರು ಹಾಗೂ ಬೈಕ್ ಕಳವಿಗೆ ಯತ್ನಿಸಿರುವ ಘಟನೆ ಡಿ.15ರಂದು ಬೆಳಗಿನ ಜಾವ 5:20ರ ಸುಮಾರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಬುಡ್ನಾರು ನಡೆದಿದೆ.
ಬುಡ್ನಾರು ನಿವಾಸಿ ಪ್ರಸಾದ್ ಎಂಬವರ ಬಾಡಿಗೆ ಕಾರಿನ ಚಾಲಕ ನಾಗ ಭೂಷಣ ಎಂಬವರು ಡಿ.14ರಂದು ರಾತ್ರಿ ಕಾರನ್ನು ಮನೆಯ ಹೊರಗೆ ಕಾರನ್ನು ನಿಲ್ಲಿಸಿ ಮಲಗಿದ್ದು, ಬೆಳಗಿವ ಜಾವ ಕಾರಿನ ಅಲರ್ಟ್ ಸೈರನ್ ಕೇಳಿ ಎಚ್ಚರಗೊಂಡು ಹೋಗಿ ನೋಡಿದಾಗ ಕಾರಿನ ಎಡಭಾಗದ ಗಾಜನ್ನು ಹೊಡೆದಿರುವುದು ಕಂಡು ಬಂದಿತು.
ಅದೇ ರೀತಿ ನೆರೆಮನೆಯವರೆಲ್ಲ ಎಚ್ಚರ ಗೊಂಡು ನೋಡಿದಾಗ ಮಂಜುನಾಥ ಎಂಬವರ ಪಲ್ಸರ್ ಬೈಕಿನ ಡಿಸ್ಪ್ಲೆ ಜಖಂಗೊಂಡಿದ್ದು, ಮುಸ್ತಾಫ್ ಸಾಹೇಬ್ ಎಂಬುವವರ ಮನೆಯಲ್ಲಿದ್ದ ಬುಲೆಟ್‌ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದೆ. ಕಳ್ಳರು ಕಾರು ಹಾಗೂ ಎರಡು ಬೈಕ್‌ಗಳನ್ನು ಕಳವು ಮಾಡಲು ಯತ್ನಿಸಿ ಪರಾರಿಯಾಗಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.