ನೋಟು ರದ್ದತಿ ಭಾರತೀಯರ ಮೇಲಿನ ಉರಿಬಾಂಬ್ ದಾಳಿ: ರಾಹುಲ್ ಗಾಂಧಿ ಟೀಕೆ

Update: 2016-12-16 16:25 GMT

ಹೊಸದಿಲ್ಲಿ, ಡಿ.16: ನೋಟು ಅಮಾನ್ಯ ನಿರ್ಧಾರವು ಕಪ್ಪುಹಣದ ವಿರುದ್ದದ ಸರ್ಜಿಕಲ್ ದಾಳಿಯಲ್ಲ. ಇದು ಪ್ರಾಮಾಣಿಕರಾಗಿರುವ ಶೇ.99ರಷ್ಟು ಭಾರತೀಯರ ಮೇಲೆ ನಡೆಸಿದ ಉರಿಬಾಂಬ್ (ಬೆಂಕಿಯ ಬಾಂಬ್) ದಾಳಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ಕಳೆದ ಎರಡೂವರೆ ವರ್ಷಗಳಿಂದ ದೇಶದ ಶೇ.60ರಷ್ಟು ಹಣವು ದೇಶದ ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಅಗರ್ಭ ಶ್ರೀಮಂತರ ಪಾಲಾಗಿದೆ ಎಂದ ಅವರು , ಎಲ್ಲಾ ಹಣವೂ ಕಪ್ಪುಹಣವಲ್ಲ ಮತ್ತು ಎಲ್ಲಾ ಕಪ್ಪುಹಣವೂ ಹಣವಲ್ಲ ಎಂದು ವಿಶ್ಲೇಷಿಸಿದರು. ಕೇವಲ ಶೇ.6ರಷ್ಟು ಕಪ್ಪುಹಣವು ನಗದಿನ ರೂಪದಲ್ಲಿದೆ. ಉಳಿದವು ರಿಯಲ್ ಎಸ್ಟೇಟ್ , ಚಿನ್ನ ಇತ್ಯಾದಿ ರೂಪದಲ್ಲಿವೆ ಅಥವಾ ಇವನ್ನು ಠೇವಣಿಯಾಗಿರಿಸಲಾಗಿದೆ . ಇದೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರಿಗೂ ತಿಳಿದಿದೆ ಎಂದರು.

 ವಿದೇಶದ ಬ್ಯಾಂಕ್‌ನಲ್ಲಿ ಇರಿಸಲಾದ ಕಪ್ಪುಹಣವನ್ನು ವಾಪಾಸು ತರಲಾಗುವುದು ಮತ್ತು ಪ್ರತಿಯೊಬ್ಬ ಭಾರತೀಯನ ಖಾತೆಯಲ್ಲೂ 15 ಲಕ್ಷ ರೂ. ಠೇವಣಿ ಇರಿಸಲಾಗುವುದು ಎಂಬ ತನ್ನ ಭರವಸೆಯನ್ನು ಮೋದಿ ಮರೆತರೇ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News