ಪೊಲೀಸ್ ಸಿಬ್ಬಂದಿಗೆ ತುಳು ಭಾಷಾ ತರಬೇತಿ

Update: 2016-12-16 16:51 GMT

ಮಂಗಳೂರು, ಡಿ. 16: ನಗರ ಪೊಲೀಸ್ ಕಮಿಷನರೇಟ್‌ಗೆ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀಸ್‌ಸಿಬ್ಬಂದಿಗಳಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಬೇತಿ ಕಾರ್ಯಾಗಾರದ ಸಮಾರೋಪ ನಡೆಯಿತು.

 ಸಮಾರೋಪದ ಅಧ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ.ಉದಯ ಎಂ.ಎ. ಉಪಸ್ಥಿತರಿದ್ದರು. ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಶಾಂತರಾಜು, ಹಾಗೂ ಡಾ. ಡಿಸಿಪಿ ಸಂಜೀವ ಎಂ. ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ತರಬೇತಿ ಶಿಬಿರದಲ್ಲಿ ಉಪನ್ಯಾಸಕರಾದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ, ವಿವಿ ಕಾಲೇಜು ಹಂಪನಕಟ್ಟ ಇದರ ಪ್ರಾಧ್ಯಾಪಕ ಡಾ.ಗಿರಿಯಪ್ಪ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯೆಯರಾದ ರೂಪಕಲಾ ಆಳ್ವ, ಪ್ರೊ.ವೇದಾವತಿ ಹಾಜರಿದ್ದರು.

ಡಿಸಿಪಿ ಶಾಂತರಾಜು,ಸ್ವಾಗತಿಸಿದರು. ಮುಲ್ಕಿ ಠಾಣೆಯ ಸಬಿಹಾ ಬಾನು, ದೀಪಾ ಎಚ್. ಸುರತ್ಕಲ್ ಠಾಣೆ, ಮಂಜಣ್ಣ ಮಂ. ಪೂರ್ವ ಠಾಣೆ, ಸತ್ಯ ಎಂ. ಮಂಗಳೂರು ಪೂರ್ವ ಠಾಣೆ ಇವರು ತುಳುವಿನಲ್ಲೇ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಉಳ್ಳಾಲ ಪೊಲೀಸ್ ಠಾಣೆಯ ಅನ್ನವ್ವ ಟಿ. ಪ್ರಾರ್ಥನೆ ನೆರವೇರಿಸಿದರು. ಎಸಿಪಿ ವೆಲೆಂಟಿನ್ ಡಿಸೋಜ, (ಸಿಸಿಆರ್‌ಬಿ) ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News