ಡಿ.19ರಂದು ಅಂತರಾಷ್ಟ್ರೀಯ ದರ್ಜೆಯ ಈಜುಕೊಳ ಅಲೋಶಿಯಸ್ ಕಾಲೇಜು ಆವರಣದಲ್ಲಿ ಉದ್ಘಾಟನೆ

Update: 2016-12-16 17:06 GMT

  ಮಂಗಳೂರು,ಡಿ.16:ನಗರದ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಬಳಸುವ ಮಾದರಿಯ ಅಂತರಾಷ್ಟ್ರೀಯ ದರ್ಜೆಯ ಈಜುಕೊಳವನ್ನು ಡಿ,19ರಂದು ಕರ್ನಾಟಕ ಜೆಸ್ವಿಟ್ ಪ್ರಾಂತ್ಯಧ್ಯಕ್ಷ ವಂ.ಜೆರೋಮ್ ಸ್ಟಾನ್ಲಿಶಿಯಸ್ ಡಿ ಸೋಜ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಅರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಮಿನಿ ಈಜು ಕೊಳವನ್ನು ಯನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಉದ್ಘಾಟಿಸಲಿದ್ದಾರೆ ಎಂದು ಈಜುಕೊಳ ನಿರ್ಮಾಣ ಸಮಿತಿಯ ಸಂಚಾಲಕ ಎನ್.ಜಿ.ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

     ಒಟ್ಟು 8.25 ಕೊಟಿ ರೂ ವೆಚ್ಚದಲ್ಲಿ 50ಮೀಟರ್ ಉದ್ದ 20 ಮೀಟರ್ ಅಗಲದ ಎಂಟು ಪಥಗಳ ಈಜುಕೊಳ ನಿರ್ಮಾಣಗೊಂಡಿದೆ. ಪಕ್ಕದಲ್ಲಿ ಚಿಕ್ಕ ಮಕ್ಕಳಿಗಾಗಿ ಮಿನಿ ಈಜುಕೊಳವನ್ನು ನಿರ್ಮಿಸಲಾಗಿದೆ ಅದನ್ನು ಇದೇ ಸಂದರ್ಭದಲ್ಲಿ ಉದ್ಘಾಟಿ ಸಲಾಗುವುದು.

        ಮಿನಿ ಈಜುಕೊಳಕ್ಕೆ ಹಳೆ ವಿದ್ಯಾರ್ಥಿ ಸಂಘ 26ಲಕ್ಷ ರೂ ದೇಣಿಗೆ ನೀಡಿದೆ.ಯುಜಿಸಿ ಒಂದು ಕೋಟಿ ರೂ ಅನುದಾನ ನೀಡಿದೆ.ಸುಸಜ್ಜಿತ ಈಜು ಕೊಳದಲ್ಲಿ ನೀರಿನ ಶುದ್ದೀಕರಣಕ್ಕಾಗಿ ಓರೆನ್ ಶುದ್ಧೀಕರಣ ವ್ಯವಸ್ಥೆ ,ಗ್ಯಾಲರಿ,ವಿಶ್ರಾಂತಿ ಕೊಠಡಿ,ವಾಹನ ನಿಲುಗಡೆ ಪ್ರದೇಶವನ್ನು ನಿರ್ಮಿಸಲಾಗಿದೆ.ಈ ಈಜುಕೊಳದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಒಳಗೊಂಡಿದೆ ಎಂದು ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ.ಸ್ವೀಬರ್ಟ್ ಡಿ ಸಿಲ್ವ ತಿಳಿಸಿದ್ದಾರೆ.

        ಡಿ.19ರಂದು ಸಂಜೆ 3.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಬಳಿಕ ಈಜುಕೊಳ ಮುಂದೆ ನಿಗದಿ ಪಡಿಸಿದ ದಿನಾಂಕದಿಂದ ಬೆಳಗ್ಗೆ 6.30ರಿಂದ ರಾತ್ರಿ 8.45ರವರೆಗೆ ವಿವಿಧ ಬ್ಯಾಚ್‌ಗಳಲ್ಲಿ ಈಜು ತರಬೇತಿಗೆ ಅವಕಾಶ ಲ್ಪಿಸಲಾಗುವುದು ನಡೆಯಲಿದೆ. ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ರೂಪಿಸಲು ಈ ಈಜುಕೊಳ ಸಹಕಾರಿಯಾಗಬಹುದು.ಸಾರ್ವಜನಿಕರಿಂದಲೂ ಸದಸ್ಯತ್ವ ಶುಲ್ಕ ಸಂಗ್ರಹಿಸಿ ಈಜು ತರಬೇತಿಯನ್ನು ನೀಡಲಾಗುವುದು.ಅತ್ಯಂತ ಆಧುನಿಕ ರೀತಿಯ ನೀರಿನ ಶುದ್ಧೀಕರಣ ವ್ಯವಸ್ಥೆ ಹೊಂದಿರುವ ದೇಶದ ಕೆಲವೇ ಈಜುಕೊಳಗಳಲ್ಲಿ ಇದು ಒಂದಾಗಿದೆ.ಪೂರ್ಣಾವಧಿಯಲ್ಲಿ ಲೈಫ್ ಗಾರ್ಡ್‌ಗಳು ಈಜುಕೊಳದ ಬಳಿ ಇರುತ್ತಾರೆ ಎಂದು ಸಂಚಾಲಕ ಮೋಹನ್ ತಿಳಿಸಿದ್ದಾರೆ.

 ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಶಾಸಕ ಅಭಯ ಚಂದ್ರ ಜೈನ್,ಜೆ.ಆರ್.ಲೋಬೊ,ಗಣೇಶ್ ಕಾರ್ಣಿಕ್,ಐವನ್ ಡಿ ಸೋಜ, ರೆಕ್ಟರ್ ವಂ,
ಡಿಯೋನಿಸಿಯಸ್ ವಾಝ್, ಹಾಗೂ ಯುಜಿಸಿ ಸೇರಿದಂತೆ ಇತರ ಸಂಸ್ಥೆಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೋಹನ್ ತಿಳಿಸಿದ್ದಾರೆ.
 ಸುದ್ದಿಗೋಷ್ಠಿಯಲ್ಲಿ ವಂ.ರಿಚಾರ್ಡ್ ಗೊನ್ಸಾಲ್ವೀಸ್,ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಂತ ಅಲೊಶಿಯಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಚಿಬಾಲ್ಡ್ ಮಿನೇಜಸ್ ,ಕಾರ್ಯದರ್ಶಿ ನವೀನ್ ಮಸ್ಕರೆನಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News