×
Ad

ಪೆರಿಯಾರ್‌ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರು ಪಾಲು

Update: 2016-12-16 22:37 IST

ಕೊಚ್ಚಿ, ಡಿ.16: ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರ್‌ ಎಂಬಲ್ಲಿ ಪೆರಿಯಾರ‍್  ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ  ಶುಕ್ರವಾರ ಸಂಜೆ ನಡೆದಿದೆ.
  ದಿಲ್ಲಿಯ ಸೈಂಟ್ ಸ್ಟೀಫನ್‌ ಕಾಲೇಜಿನ ಮೂರನೆ ವರ್ಷದ  ಪದವಿ ವಿದ್ಯಾರ್ಥಿಗಳಾದ ಬಿಹಾರ್‌ ನ ಅನುಭವ್‌ ಚಂದ್ರ ಮತ್ತು ಉತ್ತರ ಪ್ರದೇಶದ ಆದಿತ್ಯ ಪಾಟೇಲ್‌, ಪ್ರಥಮ ಪದವಿ ವಿದ್ಯಾರ್ಥಿ ವಯನಾಡ್ ನ  ಕೆನ್ನತ್‌ ಜಾನ್‌ ಮತ್ತು ಖಾಸಗಿ ರೆಸೊರ್ಟ್‌‌ವೊಂದರ ಮಾಲಿಕ ಬಿನ್ನಿ ಎಂಬವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇಬ್ಬರು ವಾರ್ಡನ್‌ಗಳು ಮತ್ತು  11 ವಿದ್ಯಾರ್ಥಿಗಳು ಪ್ರವಾಸಿಧಾಮವಾಗಿರುವ ಪನಿಯೆಲಿ  ಪೊರು ಎಂಬಲ್ಲಿಗೆ ಆಗಮಿಸಿದ್ದರು. ವಿದ್ಯಾರ್ಥಿಗಳು ನೀರಿಗೆ  ಇಳಿದಾಗ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News