ಮುಲ್ಕಿ : ಹೋಲಿ ಸ್ಪಿರಿಟ್ ಶಾಲೆಯ ವಾರ್ಷಿಕೋತ್ಸವ

Update: 2016-12-16 17:15 GMT

ಸುರತ್ಕಲ್, ಡಿ.16: ಹೆತ್ತವರು ತಮ್ಮ ಮಕ್ಕಳ ಕಲಿಕೆಯ ಸಂದರ್ಭ ಇಚ್ಚೆಗೆ ವಿರುದ್ಧವಾಗಿ ಒತ್ತಡ ಹೇರುವುದರಿಂದ ಮಕ್ಕಳಲ್ಲಿರುವ ಪ್ರತಿಭೆ ಕುಂದಲು ಕಾರಣವಾಗುತ್ತದೆ ಎಂದು ಮಂಗಳೂರು ಬಿಷಪ್ ರೆ.ಫಾ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದ್ದಾರೆ.

  ಅವರು ಮುಕ್ಕ ಹೋಲಿ ಸ್ಪಿರಿಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಮಗುವು ಬಾಲ್ಯದಿಂದಲೇ ಪ್ರತಿಭೆಗಳನ್ನು ಪಡೆದುಕೊಂಡೇ ಬರುತ್ತವೆ. ಇಂತಹ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಶಾಲೆಯ ವೇದಿಕೆಗಳು ಅವಕಾಶ ಕಲ್ಪಿಸಬೇಕು ಎಂದರು.
  
     ವಿದೇಶಗಳಲ್ಲಿ ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ಕೊಡುವ ವ್ಯವಸ್ಥೆ ನಮಗೆ ಮಾದರಿಯುತವಾಗಿದೆ. ಅಲ್ಲದೇ, ಹೆತ್ತವರು ತಮ್ಮ ಮಕ್ಕಳನ್ನು ಕೇವಲ ಪಠ್ಯ ವಿಷಯಕ್ಕೆ ಮಾತ್ರ ಸೀಮಿತಗೊಳಿಸದೆ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಅವಕಾಶ ನೀಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.

ಇದೇ ವೇಳೆ ಶಾಲೆಯ ವಾರ್ಷಿಕ ಪುರವಣಿಯನ್ನು ಬಿಷಪ್ ಬಿಡುಗಡೆಗೊಳಿಸಿದರು.

ಶಾಲಾ ಆಡಳಿತ ಮಂಡಳಿ ವತಿಯಿಂದ ಬಿಷಪ್ ಅವರನ್ನು ಗೌರವಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಿಸಿಲ್ಲಾ ವಾರ್ಷಿಕ ವರದಿ ವಾಚಿಸಿದರು.

ವೇದಿಕೆಯಲ್ಲಿ ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕ ಜಗದೀಶ ಬಾಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್‌ಸುಂದರ್ ಶೆಟ್ಟಿ, ರೆ.ಫಾ.ನೋಬರ್ಟ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News