×
Ad

ಅಮೆಮಾರ್ ನಲ್ಲಿ ದ್ವಿದಿನ ಧಾರ್ಮಿಕ ಪ್ರವಚನ

Update: 2016-12-16 22:51 IST

ಫರಂಗಿಪೇಟೆ, ಡಿ. 16 : ಬದ್ರಿಯಾ ಮದರಸ ಮತ್ತು ಜುಮ್ಮಾ ಮಸ್ಜಿದ್ ಅಮೆಮಾರ್ ಇದರ ಆಶ್ರಯದಲ್ಲಿ ದಿನಾಂಕ 18 ಮತ್ತು 19 ರಂದು ಹುಬ್ಬುರ್ರಸೂಲು ಎಂಬ ವಿಷಯದಲ್ಲಿ ದ್ವಿದಿನ ದಾರ್ಮಿಕ ಪ್ರವಚನ ಮರ್ ಹೂಮ್ ಹಸೈನಾರ್ ಬಾಖವಿ ವೇದಿಕೆಯಲ್ಲಿ ನಡೆಯಲಿದೆ  .

ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ಉಮರಬ್ವ ಎ.ಎಸ್.ಬಿ ವಹಿಸಲಿದ್ದಾರೆ.
ಮುಖ್ಯ ಭಾಷಣಗಾರರಾಗಿ ಹಾಫಿಲ್ ಇಕೆ ಅಬೂಬಕ್ಕರ್ ನಿಝಾಮಿ ಮಲೇಶಿಯಾ ಮತ್ತು ದುಅ ಆಶಿರ್ವಚನ ಸೆಯ್ಯದ್ ಝೈನುಲ್ ಆಬಿದೀನ್ ತಙಲ್ ವಾಡಾನ ಪಳ್ಳಿ ಕೇರಳ ಹಾಗೂ ಕರ್ನಾಟಕಕ್ಕೆ ಪ್ರಥಮ ಬಾರಿಗೆ ಆಗಮಿಸಲಿಕ್ಕಿರುವ 9 ರ ಹರೆಯದ  ಬಾಲಕ ಅಬ್ದುರ್ರಹ್ಮಾನ್ ಹಾದಿ ಮಲೇಷ್ಯ ರವರು ಪ್ರವಚನ ನಡೆಸಲಿಕ್ಕಿದ್ದಾರೆ ಎಂದು ಬದ್ರಿಯಾ ಮದರಸ ಮತ್ತು ಜುಮ್ಮಾ ಮಸ್ಜಿದ್ ಅಮೆಮಾರ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್  ತಿಳಿಸಿದ್ದಾರೆ .                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News