ಮುಲ್ಕಿ : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Update: 2016-12-16 17:35 GMT

ಮುಲ್ಕಿ, ಡಿ.16: ಶಾಲಾ ಪಾಠಗಳ ಜೊತೆಗೆ ಶಿಕ್ಷಣದ ವೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು ಎಂದು ಮುಲ್ಕಿ ಸೀಮೆಯ ಅರಸರು ಹಾಗೂ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತ ಅರಸರು ಹೇಳಿದರು.

  ಅವರು ಸರಕಾರಿ ಪದವಿ ಪೂರ್ವ ಕಾಲೇಜು ಇದರ ಪ್ರೌಢ ಹಾಗೂ ಕಾಲೇಜು ವಿಭಾಗಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮುಲ್ಕಿಯ ವಕೀಲ ಶಿವಾನಂದ ಕಾಮತ್, ಗುತ್ತಿಗೆದಾರ ಹಾಜಿ ಅಬ್ಬಾಸ್ ಅಲಿ, ಕಾಲೇಜು ಅಬಿವೃದ್ಧಿ ಸಮಿತಿಯ ಬೋಳ ಸುರೇಂದ್ರ ಕಾಮತ್, ನಿವೃತ್ತ ಶಿಕ್ಷಕ ಅಚ್ಯುತ್ ಮಾಸ್ಟರ್ ಕೊಲೆಕಾಡಿ, ಕಾಲೇಜಿನ ಪ್ರಾಂಶುಪಾಲ ವಿಷ್ಣು ಮೂರ್ತಿ, ಪ್ರೌಢ ಶಾಲಾ ಮುಖ್ಯೋಪಾದ್ಯಾಯ ವಾಸುದೇವ ಭಾಗವತ್, ಶಾಲಾಭಿವೃದ್ಧಿ ಸಮಿತಿಯ ಸದಾಶಿವ ಆಚಾರ್ಯ, ಕುಮಾರ್ ಹಾಗೂ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

  ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿದರು, ವಾಸುದೇವ ಭಾಗವತ್ ಧನ್ಯವಾದ ಆರ್ಪಿಸಿದರು, ಉಪನ್ಯಾಸಕ ರಮಾನಂದ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಶಾಲಾ ಕ್ರೀಡಾಕೂಟಗಳು ಹಾಗೂ ಕಲಿಕೆಯ ಸಾಧಕರಿಗೆ ಬಹುಮಾನ ವಿತರಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News