ಪಲಿಮಾರು ಶ್ರೀಗಳಿಗೆ ಷಷ್ಠಬ್ದಿಪೂರ್ತಿ ಅಭಿವಂದನೆ
ಉಡುಪಿ, ಡಿ.16: 2018ರಲ್ಲಿ ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಗುರುವಂದನೆ ಹಾಗೂ ಷಷ್ಠಬ್ದಿಪೂರ್ತಿ ಅಭಿವಂದನೆ ಇತ್ತೀಚೆಗೆ ಕುತ್ಯಾರಿನಲ್ಲಿ ನಡೆಯಿತು.
ಉಡುಪಿ, ಡಿ.16: 2018ರಲ್ಲಿ ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಗುರುವಂದನೆ ಹಾಗೂ ಷಷ್ಠಬ್ದಿಪೂರ್ತಿ ಅಭಿವಂದನೆ ಇತ್ತೀಚೆಗೆ ಕುತ್ಯಾರಿನಲ್ಲಿ ನಡೆಯಿತು. ಅರುವತ್ತು ವಸಂತಗಳನ್ನು ಪೂರೈಸಿದ, ತಮ್ಮ ಯತಿ ಆಶ್ರಮದ ನಾಲ್ಕು ದಶಕಗಳ ಸಾರ್ಥಕ ಜೀವನವನ್ನು ನಡೆಸಿದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಶಿರ್ವ, ಕುತ್ಯಾರಿನ ಮಠದ ಅಭಿಮಾನಿಗಳು, ಶಿಷ್ಯರು ಹಾಗೂ ಉಪಾಧ್ಯಾಯ ಬಂಧುಗಳು ಒಟ್ಟಾಗಿ 60 ಮುಡಿ ಅಕ್ಕಿಗಲ್ಲಿ ತುಲಾಭಾರವನ್ನು ನಡೆಸಿದರು.
ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕುತ್ಯಾರು ಇಂದ್ರಪುರದಶ್ರೀಲಕ್ಷ್ಮೀ ನಿವಾಸದಲ್ಲಿ ಕಾರ್ಯಕ್ರಮ ನಡೆಯಿತು.