ಮೀಟರ್ ಬಡ್ಡಿ ವ್ಯವಹಾರ ಕಡಿವಾಣಕ್ಕೆ ಆಗ್ರಹ

Update: 2016-12-16 18:01 GMT

ಮಂಗಳೂರು, ಡಿ. 16: ದ.ಕ. ಜಿಲ್ಲೆಯ ಕೆಲವೆಡೆಗಳಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ೆನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸ್ ಆಯುಕ್ತರ ಪರವಾಗಿ ಡಿಸಿಪಿ ಕೆ.ಎಂ. ಶಾಂತರಾಜು ಅವರು ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿದೂರು ಮತ್ತು ಅಹವಾಲುಗಳನ್ನು ದಾಖಲಿಸಿಕೊಂಡರು.
ಮಂಗಳೂರು ಸಹಿತ ಪುತ್ತೂರಿನ ಕೆಲವೆಡೆ ಮೀಟರ್ ಬಡ್ಡಿಯ ದಂಧೆ ನಡೆಯುತ್ತಿದೆ. 10 ಸಾವಿರಕ್ಕೆ 1 ಸಾವಿರ ರೂ. ಬಡ್ಡಿಯನ್ನು ವಸೂಲು ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು. ಈ ಬಗ್ಗೆ ಸೂಕ್ತ ದಾಖಲಾತಿಗಳನ್ನು ಇರಿಸಿಕೊಂಡು ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಡಿಸಿಪಿ ಶಾಂತರಾಜು ಸಲಹೆ ಮಾಡಿದರು.
ಬಸ್‌ಗಳಲ್ಲಿ ಮೀಸಲು ಸೀಟುಗಳ ನಿಯಮ ಉಲ್ಲಂಘನೆ, ಆಟೋ ಚಾಲಕರಿಂದ ಅಧಿಕ ಬಾಡಿಗೆ ದರ ವಸೂಲಿ, ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಎಲ್‌ಇಡಿ ಬಲ್ಬ್ ಜೋಡಿಸಿ ಅಧಿಕ ೆಕಸ್ ಇರುವ ಲೈಟ್ ಹಾಯಿಸಿ ಚಾಲನೆ ಮಾಡುವ ಬಗ್ಗೆ ದೂರುಗಳು ಕೇಳಿ ಬಂದವು. ಸಂಚಾರ ನಿಯಮ ಉಲ್ಲಂಘನೆ ಕುರಿತಂತೆ ಈಗಾಗಲೇ ಕ್ರಮ ಜರಗಿಸಲು ಆರಂಭಿಸಲಾಗಿದ್ದು, ಈ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಡಿಸಿಪಿ ತಿಳಿಸಿದರು.
ಮುಕ್ಕ ಬಸ್ ಸ್ಟಾಪ್‌ನಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ವಿದ್ಯಾರ್ಥಿಗಳನ್ನು ಮಾತ್ರ ಹತ್ತಿಸಿ ಸಾರ್ವಜನಿಕರಿದ್ದರೆ ನಿಲುಗಡೆ ನೀಡದಿರುವ ಬಗ್ಗೆ ದೂರು ಕೇಳಿ ಬಂತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಕಿರುವ ಬ್ಯಾರಿಕೇಡ್‌ಗಳಿಗೆ ರ್ಲಿೆಕ್ಟರ್ ಸ್ಟಿಕರ್ ಅಳವಡಿಸಬೇಕು ಎಂದು ಮನವಿ ಮಾಡಲಾಯಿತು.ಹಂಪನಕಟ್ಟೆ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಜೀಬ್ರಾ ಕ್ರಾಸ್‌ಗೆ ಬಣ್ಣ ಬಳಿಯದೆ ಪಾದಚಾರಿಗಳಿಗೆ ರಸ್ತೆ ದಾಟಲು ಸಮಸ್ಯೆ, ಬೋಂದೆಲ್ ಕೆಎಚ್‌ಬಿ ಕಾಲನಿ ರಸ್ತೆಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ಅತಿ ವೇಗದ ಚಾಲನೆ, ಕೆಪಿಟಿ- ಕುಂಟಿಕಾನ್ ನಡುವಣ ಹೆದ್ದಾರಿ ಬದಿ ಅಗಲಗೊಳಿಸಿದ ಕಡೆ ಟ್ರಕ್‌ಗಳ ನಿಲುಗಡೆ ಕುರಿತಂತೆ ದೂರುಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News