×
Ad

ಕರಾವಳಿ 3 ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಭೆ

Update: 2016-12-16 23:41 IST

ಉಡುಪಿ, ಡಿ.16:ಕರ್ನಾಟಕ ಕರಾವಳಿ ಪ್ರವಾಸಿ ವೃತ್ತ ಅಭಿವೃದ್ಧಿ ಯೋಜನೆ ಕುರಿತು ಉಡುಪಿ, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ನವೀನ್‌ರಾಜ್ ಸಿಂಗ್ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಮಂಜುಳಾ, ಉಡುಪಿ ಜಿಲ್ಲಾಧಿಕಾರಿ ಟಿ ವೆಂಕಟೇಶ್, ಉತ್ತರ ಕನ್ನಡ ಜಿಲ್ಲಾಧಿಕಾರಿ ನಕುಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್ ಉಪಸ್ಥಿತರಿದ್ದರು.

ಮೂರು ಕರಾವಳಿ ಜಿಲ್ಲೆಗಳ ಆಯ್ದ ಸಮುದ್ರ ತೀರಗಳ ಅಭಿವೃದ್ಧಿ ಕುರಿತು ಸವಿವರ ಚರ್ಚೆ ನಡೆಸಿದ ಕಾರ್ಯದರ್ಶಿಗಳು, ಮೂಲಸೌಕರ್ಯವನ್ನು ಲ್ಯಾಂಡ್‌ಆರ್ಮಿ ಮೂಲಕ ಅನುಷ್ಠಾನಕ್ಕೆ ತರಲು ಹಲವು ಮಾರ್ಗದರ್ಶನ ಗಳನ್ನು ನೀಡಿದರು.

ಮೂರು ಕರಾವಳಿ ಜಿಲ್ಲೆಗಳ ಆಯ್ದ ಸಮುದ್ರ ತೀರಗಳ ಅಭಿವೃದ್ಧಿ ಕುರಿತು ಸವಿವರ ಚರ್ಚೆ ನಡೆಸಿದ ಕಾರ್ಯದರ್ಶಿಗಳು, ಮೂಲಸೌಕರ್ಯವನ್ನು ಲ್ಯಾಂಡ್‌ಆರ್ಮಿ ಮೂಲಕ ಅನುಷ್ಠಾನಕ್ಕೆ ತರಲು ಹಲವು ಮಾರ್ಗದರ್ಶನ ಗಳನ್ನು ನೀಡಿದರು. ಸಭೆಯ ಬಳಿಕ ಮಲ್ಪೆಬೀಚ್‌ಗೆ ತೆರಳಿ ಬೀಚ್ ಕ್ಲೀನಿಂಗ್ ಮಿಷನ್ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News