ಇನೋಳಿ: ಅಂಗಡಿಗೆ ನುಗ್ಗಿ ಕಳವು
Update: 2016-12-16 23:46 IST
ಕೊಣಾಜೆ, ಡಿ.16: ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಇನೋಳಿ ಕಂಬಳಪದವಿನಲ್ಲಿರುವ ವಿಕ್ಟರ್ ಮೊಂತೆರೊ ಎಂಬವರ ಅಂಗಡಿಗೆ ಗುರುವಾರ ತಡರಾತ್ರಿ ಕಳ್ಳರು ನುಗ್ಗಿ ನಗದು ಮತ್ತು ಸೊತ್ತು ಕಳವುಗೈದಿರುವ ಘಟನೆ ನಡೆದಿದೆ.
ಅಂಗಡಿಯ ಹೆಂಚು ತೆಗೆದು ಒಳಗಡೆ ನುಗ್ಗಿದ ಕಳ್ಳರು ಹಾರ್ಡ್‌ಬೋರ್ಡ್‌ನಿಂದ ನಿರ್ಮಿಸಲಾದ ಮೇಲ್ಛಾವಣಿಯನ್ನು ಮುರಿದು ಅಂಗಡಿಯಲ್ಲಿದ್ದ ತಿಂಡಿ, ತಿನಿಸುಗಳು ಹಾಗೂ ಮೂರು ಸಾವಿರ ದಷ್ಟಿದ್ದ ಚಿಲ್ಲರೆ ನಾಣ್ಯಗಳನ್ನು ಕಳವುಗೈದಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.