×
Ad

ಸ್ಕೂಟರಿನಿಂದ ಬಿದ್ದು ಮಹಿಳೆ ಮೃತ್ಯು

Update: 2016-12-16 23:47 IST

ಮಲ್ಪೆ, ಡಿ.16: ಇಲ್ಲಿಗೆ ಸಮೀಪದ ಕೊಳ ಎಂಬಲ್ಲಿ ಡಿ.14ರಂದು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ರಸ್ತೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮಲ್ಪೆಯ ಶಕುಂತಳಾ(48) ಎಂದು ಗುರುತಿಸಲಾಗಿದೆ.

ಮೃತ ಶಕುಂತಳಾ ತನ್ನ ಮಗ ಚೇತನ್ ಮಲ್ಪೆಯವರ ಸ್ಕೂಟರ್‌ನಲ್ಲಿ ಸಂಜೆ 5:30ರ ಸುಮಾರಿಗೆ ಬೀಚ್ ಕೊಳ ರಸ್ತೆಯಿಂದ ಮಲ್ಪೆ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಏಕಾಏಕಿ ಹಂಪ್ಸ್ ನೋಡಿ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಶಕುಂತಳಾ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News