ಸಿವಿಲ್ ಪ್ರಕರಣದಲ್ಲಿ ಪೊಲೀಸರಿಂದ ಹಿಂಸೆ: ಆರೋಪ

Update: 2016-12-16 18:29 GMT

ಉಡುಪಿ, ಡಿ.16: ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಯಲ್ಲಿರುವ ಸಿವಿಲ್ ಪ್ರಕರಣದಲ್ಲಿ ಎದುರುದಾರರೊಂದಿಗೆ ಶಾಮೀಲಾಗಿ ಮಾನಸಿಕ ಹಿಂಸೆ ನೀಡುತ್ತಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಕೋಟ ಠಾಣೆಯ ಸಿಬ್ಬಂದಿಗಳಾದ ವಿಕ್ರಮ್ ಮತ್ತು ಸಂತೋಷ್ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ ಎಂದು ಕುಂದಾಪುರ ಬೇಳೂರಿನ ಶಂಕರ್ ಹೆಗ್ಡೆ(81) ತಿಳಿಸಿದ್ದಾರೆ.

 ಅ.28ರಂದು ಜಯಶೀಲ ಶೆಡ್ತಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ಗೆ ದೂರು ನೀಡಿ ಜಾಗಕ್ಕೆ ಪ್ರವೇಶ ಮಾಡಲು ಮತ್ತು ಅಡಿಕೆ ಕೊಯ್ಯಲು ಬಿಡು ವುದಿಲ್ಲ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಡಿ.5ರಂದು ಜಯಶೀಲಾ ಶೆಟ್ಟಿ, ಪತಿ ಸುರೇಂದ್ರ ಶೆಟ್ಟಿ, ಅಣ್ಣಂದಿರಾದ ಕರುಣಾಕರ ಶೆಟ್ಟಿ, ಶಶಿಧರ ಶೆಟ್ಟಿ, ಕರುಣಾಕರ ಶೆಟ್ಟಿ ಸೇರಿದಂತೆ ಸುಮಾರು 15-20 ಮಂದಿ ಅಕ್ರಮ ಪ್ರವೇಶ ಮಾಡಿ ನನ್ನ ಪತ್ನಿ ಸುಶೀಲಾ ಶೆಡ್ತಿಗೆ ಹೊಡೆದು ಅಡಿಕೆ ಕೊಯ್ದು ಹೋಗಿದ್ದು, ಈ ಕುರಿತು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದೆನು. ಈ ಮಧ್ಯೆ ಪೊಲೀಸರು ಹಾಗೂ ಜಯಶೀಲ ಶೆಡ್ತಿ ನಮಗೆ ನಿರಂತರ ಕಿರುಕುಳ ನೀಡುತ್ತಿ ದ್ದರು ಎಂದು ಅವರು ಆರೋಪಿಸಿದರು.
 ಡಿ.12ರಂದು ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಸಿಬ್ಬಂದಿ ಗಳು ಜಯಶೀಲ ಶೆಡ್ತಿ ಮತ್ತು ಅಣ್ಣಂದಿರ ಒತ್ತಡದಿಂದ ಸ್ಥಳಕ್ಕೆ ಬಂದು ನಾಳೆ ಅಡಿಕೆ ಕೊಯ್ದು ಕೊಡುವಾಗ ಅಡ್ಡ ಬಂದರೆ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ. ಡಿ.13ರಂದು ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಅವರ ವಿಶೇಷ ಆಸಕ್ತಿಯಲ್ಲಿ ಕರುಣಾಕರ ಶೆಟ್ಟಿ, ಶಶಿಧರ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಯಶೀಲ ಶೆಟ್ಟಿ, ಸುರೇಂದ್ರ ಶೆಟ್ಟಿ, ಕೋಟ ಪೊಲೀಸ್ ಪೇದೆಗಳಾದ ವಿಕ್ರಮ್ ಹಾಗೂ ಸಂತೋಷ್ ಹಾಗೂ ಇತರರು ಅಕ್ರಮ ಕೂಟ ಸೇರಿ ನನ್ನ ಜಾಗಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆಯನ್ನು ಕಳವು ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಅವರು ತಿಳಿಸಿದರು.
ನಮಗೆ ಹಿಂಸೆ ನೀಡುತ್ತಿರುವ ಪೊಲೀಸರು ಹಾಗೂ ಜಯಶೀಲ ಶೆಡ್ತಿ ಕುಟುಂಬದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮಗೆ ಆತ್ಮ ಹತ್ಯೆಯೊಂದೆ ದಾರಿ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪತ್ನಿ ಸುಶೀಲಾ ಶೆಡ್ತಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News