ದಂಗಲ್ ಗೆ ಡಬ್ ಮಾಡಲು ರಜನೀಕಾಂತ್ ನಿರಾಕರಿಸಿದ್ದೇಕೆ ?
ಮುಂಬೈ, ಡಿ.17: ಸೂಪರ್ ಸ್ಟಾರ್ ರಜನೀಕಾಂತ್ ಅವರ ದನಿ ಸುಲವಾಗಿ ಜನರು ಗುರುತಿಸುವುದರಿಂದಅವರು ತಮ್ಮ ಮುಂಬರುವ ಚಿತ್ರ ‘ದಂಗಲ್’ ಗೆ ಡಬ್ ಮಾಡಲು ನಿರಾಕರಿಸಿದ್ದರು ಎಂದು ನಟ-ನಿರ್ಮಾಪಕ ಆಮಿರ್ ಖಾನ್ ಬಹಿರಂಗಪಡಿಸಿದ್ದಾರೆ.
‘‘ಚಿತ್ರವನ್ನು ತಮಿಳು ಮತ್ತು ತೆಲುಗಿಗೆ ಡಬ್ ಮಾಡು ಸಂದರ್ಭ ನಾನು ರಜನಿ ಸರ್ ಅವರನ್ನು ಕಂಡು ಮಾತನಾಡಿಸಿದ್ದೆ. ಚಿತ್ರ ಅವರಿಗೆ ಇಷ್ಟವಾಗಿತ್ತು. ಆದರೆ ಅವರೊಂದಿಗೆ ಡಬ್ಬಿಂಗ್ ಬಗ್ಗೆ ಮಾತನಾಡಿದಾಗ ಅವರ ದನಿಯನ್ನು ಜನರು ಕೂಡಲೇ ಗುರುತಿಸುತ್ತಾರೆಂದು ನಾವು ತಿಳಿದೆವು ಹಾಗೂ ನನ್ನ ಮುಖಕ್ಕೆ ಅವರ ದನಿ ಸೂಕ್ತವಾಗದು ಎಂಬ ನಿರ್ಧಾರಕ್ಕೆ ಬಂದೆವು. ಆದರೆ ಅವರಿಗೆ ಚಿತ್ರ ತುಂಬಾ ಇಷ್ಟವಾಯಿತು ಹಾಗೂ ನನ್ನನ್ನು ಅವರು ಉತ್ತೇಜಿಸಿದರು’’ ಎಂದು ಆಮಿರ್ ಹೇಳಿದ್ದಾರಲ್ಲದೆ, ರಜನೀಕಾಂತ್ ಅವರೊಂದಿಗೆ ಕೆಲಸ ಮಾಡಲು ತಾನು ಹಾತೊರೆಯುತ್ತಿರುವುದಾಗಿ ಹೇಳಿದರು.
‘‘ಅವರು ಹಿಂದಿ ಅಥವಾ ತಮಿಳು ಸಿನೆಮಾ ಮಾಡಿದರೂ ನಾವು ಅವರ ಚಿತ್ರ ವೀಕ್ಷಿಸುತ್ತೇವೆ. ಅವರ 2.0 ಚಿತ್ರ ಬರುತ್ತಿದೆ ಹಾಗೂ ನಾವು ಅದನ್ನು ಎದುರು ನೋಡುತ್ತಿದ್ದೇವೆ. ನಾನು ರಜನಿ ಸರ್ ಅವರ ದೊಡ್ಡ ಫ್ಯಾನ್’’ ಎಂದು ಆಮಿರ್ ಹೇಳಿದರು.