×
Ad

ಚಿತ್ರನಟ ಎಂ.ಕೆ.ಮಠ ಅವರ ಮೇಲೆ ಹಲ್ಲೆ ಯತ್ನ

Update: 2016-12-17 15:15 IST

ಉಪ್ಪಿನಂಗಡಿ, ಡಿ.17: ಚಲನಚಿತ್ರ ನಟ ಎಂ.ಕೆ.ಮಠ ಅವರ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ಇಲ್ಲಿಗೆ ಸಮೀಪದ ಕೂಟೇಲು ಎಂಬಲ್ಲಿ ನಡೆದಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೂಟೇಲು ದರ್ಗಾದ ಬಳಿ ಈ ಘಟನೆ ನಡೆದಿದೆ. ಎಂ.ಕೆ.ಮಠ ಅವರು ರಿಕ್ಷಾದಲ್ಲಿ ಉಪ್ಪಿನಂಗಡಿಯಿಂದ ಕೂಟೇಲುವಿನಲ್ಲಿರುವ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಕಾರೊಂದಕ್ಕೆ ದಾರಿ ಬಿಟ್ಟುಕೊಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ. ಈ ವೇಳೆ ಕಾರಿನಲ್ಲಿದ್ದ ಆರು ಮಂದಿಯ ತಂಡ ಮಠ ಅವರ ಮೇಲೆ ಹಲ್ಲೆಗೆ ಮುಂದಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News