×
Ad

ಅಲೆಪ್ಪೊ; ಇರಾನ್, ರಷ್ಯಗಳ ಕೈಗಳು ರಕ್ತಸಿಕ್ತ: ಒಬಾಮ

Update: 2016-12-17 16:35 IST

ವಾಷಿಂಗ್ಟನ್,ಡಿ.17: ಅಲೆಪ್ಪೊದ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್ ಹಾಗೂ ಅವರಿಗೆ ಸಹಾಯ ಮಾಡುತ್ತಿರುವ ಇರಾನ್, ರಷ್ಯಗಳ ಕೈ ರಕ್ತದಕಲೆಗಳಿಂದ ತುಂಬಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಸಿರಿಯದ ಸರಕಾರ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದೆ. ಆದರೆ ಅದಕ್ಕೆ ಜಗತ್ತನ್ನು ಮೂರ್ಖನನ್ನಾಗಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲಿ ನಡೆಯುತ್ತಿರುವ ನರಮೇಧವನ್ನು ಮರೆಯಲು ಜಗತ್ತಿಗೆಸಾಧ್ಯವಿಲ್ಲ ಎಂದು ಒಬಾಮ ಹೇಳಿದ್ದಾರೆ. ವೈಟ್ ಹೌಸ್‌ನಲ್ಲಿ ಕರೆಯಲಾಗಿದ್ದ, ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿರುವ ಅವರ ಈ ವರ್ಷದ ಕೊನೆಯ ಸುದ್ದಿಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು.

"ಸಿರಿಯದಲ್ಲಿ ಸೇನೆಯ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾನಾಂತರಿಸಬೇಕಾಗಿದೆ. ಇದಕ್ಕಾಗಿ ಏಕೀಕೃತ ಸ್ವತಂತ್ರ ಅಂತಾರಾಷ್ಟ್ರೀಯ ನಿಗಾ ಸೇನೆಯೊಂದನ್ನು ರೂಪಿಸಬೇಕು"ಎಂದು ಒಬಾಮ ಆಗ್ರಹಿಸಿದ್ದಾರೆ.

ಜಗತ್ತಿನ ಹಲವು ಭಾಗಗಳಲ್ಲಿ ಪರಿಹಾರ ಅಸಾಧ್ಯವಾಗಿರುವ ರಾಜಕೀಯ ಅರಾಜಕ ಸ್ಥಿತಿ ಇದೆ. ಇದರಿಂದಾಗಿ ಅಸಹಾಯಕ ಜನರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಅಲೆಪ್ಪೊದ ನಾಗರಿಕರು ಈಗ ಅನುಭವಿಸುವಂತಹ ದೌರ್ಜನ್ಯಗಳು ಬೇರೆಲ್ಲಿಯೂ ಇಲ್ಲ. ಸಿರಿಯದ ಅಂತರ್‌ಕಲಹ ಕೊನೆಗೊಳ್ಳಲೇ ಬೇಕು. ಅಲ್ಲಿನ ನಾಗರಿಕರ ಕಷ್ಟಕಾರ್ಪಣ್ಯಗಳು ಕೊನೆಗೊಳ್ಳಬೇಕು. ಇದಕ್ಕಾಗಿ ಪ್ರಯತ್ನಗಳೂ ನಡೆಯುತ್ತಿವೆ. ಸಿರಿಯದ ಸಮಸ್ಯೆ ತಾನು ಅಧ್ಯಕ್ಷನಾದ ಬಳಿಕ ಎದುರಿಸಿದ ಅತ್ಯಂತ ಕಠಿಣ ಸಮಸ್ಯೆಯಾಗಿದೆ ಎಂದು ಒಬಾಮ ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News