×
Ad

ಸುಳ್ಯ: ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ರಂಗಮಂದಿರ ಲೋಕಾರ್ಪಣೆ

Update: 2016-12-17 17:22 IST

 ಸುಳ್ಯ, ಡಿ. 17 : ದ.ಕ. ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ಯುವಜನ ಹಬ್ಬ ಹಾಗೂ ತಾಲೂಕು ಮಟ್ಟದ ಯುವಜನ ಮೇಳ ಆರಂಭಗೊಂಡಿದೆ. ಇದರ ಜತೆಗೆ ಕರಾವಳಿ ಉತ್ಸವವು ನಡೆಯುತ್ತಿದೆ.

   ಇದೇ ಸಂದರ್ಭದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ನೂತನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ರಂಗಮಂದಿರದ ಉದ್ಘಾಟನೆಯನ್ನು ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ನೆರವೇರಿಸಿದರು.

ಲಗೋರಿ ಪಂದ್ಯಾಟವನ್ನು ಪುತ್ತೂರು ಸಹಾಯಕ ಕಮಿಷನರ್ ರಘನಂದನ್ ಮೂರ್ತಿ ಉದ್ಘಾಟಿಸಿದರು.

ವಸ್ತು ಪ್ರದರ್ಶನ ಮಳಿಗೆಯನ್ನು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಉದ್ಘಾಟಿಸಿದರು.

ಪ್ರಸಾದನ ಕೊಠಡಿಯನ್ನು ಎನ್.ಜಯಪ್ರಕಾಶ್ ರೈ ಅನಾವರಣಗೊಳಿಸಿದರು.

ದಾನಿಗಳ ನಾಮ ಫಲಕವನ್ನು ನ.ಪಂ. ಸದಸ್ಯ ಎನ್.ಎ ರಾಮಚಂದ್ರ ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು.

ನ.ಪಂ. ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ನಿವೃತ್ತ ಬಿಡಿಒ ಮೀನಾಕ್ಷಿ ಗೌಡ, ಸುಳ್ಯ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಿದಾನಂದ ಮಜಿಕೋಡಿ, ಉಬರಡ್ಕ ಗ್ರಾ.ಪಂ. ಅಧ್ಯಕ್ಷ ಹರೀಶ್ ಉಬರಡ್ಕ, ಉದ್ಯಮಿ ಉಮೇಶ್ ಮುಂಡೋಡಿ, ಎಪಿಎಂ ಅಧ್ಯಕ್ಷ ಜಾಕೆ ಮಾಧವ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿದರು.

ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಸ್ತಾವಣೆ ಗೈದರು. ಮನಮೋಹನ ಬಳ್ಳಡ್ಕ , ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

ಇ.ಒ. ಮಧುಕುಮಾರ್, ತಹಶೀಲ್ದಾರ ಎಂ.ಎಂ. ಗಣೇಶ್, ನ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್, ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ದಿಲೀಪ್ ಬಾಬ್ಲುಬೆಟ್ಟು, ಕೋಶಾಧಿಕಾರಿ ಆರ್.ಕೆ. ಮಹಮ್ಮದ್ ವೇದಿಕೆಯಲ್ಲಿದ್ದರು.

ಆಕರ್ಷಕ ಮೆರವಣಿಗೆ:

 ಸುಳ್ಯದ ವಿಷ್ಣು ಸರ್ಕಲ್ ಬಳಿಯಿಂದ ಆರಂಭಗೊಂಡ ಮೆರವಣಿಗೆಗೆ ಉದ್ಯಮಿ ಹರಿರಾಯ ಕಾಮತ್‌ರವರು ಧ್ವಜ ಬೀಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಸುಳ್ಯ ತಾಲೂಕಿನ ಯುವಕ ಯುವತಿ ಮಂಡಲದ ಸದಸ್ಯರುಗಳು, ಸುಳ್ಯ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ ವೀರದಾಸೆ, ಕಲ್ಲಡ್ಕದ ಗೊಂಬೆಗಳು, ಹುಲಿವೇಷ, ಕೇರಳದ ಚೆಂಡೆ, ಸಿಂಗಾರಿ ಮೇಳ, ಟ್ಯಾಬ್ಲೋಗಳು ಇದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News