ಕೈದಿಯಿಂದ ಗಾಂಜಾ ವಶ
Update: 2016-12-17 19:37 IST
ಮಂಗಳೂರು, ಡಿ.17: ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಬೆಂಗಾವಲಿನಲ್ಲಿ ಗದಗದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕರೆತಂದ ವಿಚಾರಣಾಧೀನ ಕೈದಿಯಲ್ಲಿ 25 ಗ್ರಾಂ ಗಾಂಜಾವನ್ನು ಜೈಲಿನ ಸಿಬ್ಬಂದಿ ವರ್ಗ ಪತ್ತೆ ಹಚ್ಚಿದೆ.
ಗದಗದ ರಾಜು ಎಂಬಾತನನ್ನು ಡಿ.14ರಂದು ಗದಗ ಜಿಲ್ಲೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಡಿ.16ರಂದು ಮರಳಿ ಮಂಗಳೂರಿನ ಹೊಸ ಜೈಲಿಗೆ ಕರೆತಂದಾಗ ಸಿಬ್ಬಂದಿ ವರ್ಗ ತಪಾಸಣೆ ನಡೆಸುವ ವೇಳೆಗೆ 5 ಪ್ಲಾಸ್ಟಿಕ್ ಕವರು ಕಂಡು ಬಂತು. ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ಈ ಬಗ್ಗೆ ಆರೋಪಿ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.