ಲಂಡನ್: ಮಹಿಳೆಯನ್ನು ಹಿಜಾಬ್ ಹಿಡಿದು ಎಳೆದೊಯ್ದರು
Update: 2016-12-17 20:36 IST
ಲಂಡನ್, ಡಿ. 17: ಲಂಡನ್‌ನ ಜನನಿಬಿಡ ಪ್ರದೇಶವೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಮುಸ್ಲಿಮ್ ಮಹಿಳೆಯೊಬ್ಬರನ್ನು ನೆಲಕ್ಕೆ ಕೆಡವಿ ಆಕೆಯನ್ನು ಹಿಜಾಬ್‌ನಿಂದ ಹಿಡಿದು ಎಳೆದುಕೊಂಡು ಹೋದ ಘಟನೆಯೊಂದು ವರದಿಯಾಗಿದೆ.
ಬ್ರಿಟಿಶ್ ಮಹಿಳೆ ಪೂರ್ವ ಲಂಡನ್‌ನ ಚಿಂಗ್‌ಫೋರ್ಡ್‌ನಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಮೇಲೆ ಆಕ್ರಮಣ ನಡೆದಿದೆ.
ಈ ವಾರದ ಆರಂಭದಲ್ಲಿ ನಡೆದ ಘಟನೆಯ ಬಗ್ಗೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಸಾರ್ವಜನಿಕರಿಂದ ಮಾಹಿತಿ ಕೋರಿದೆ.