×
Ad

ಟರ್ಕಿ: ಕಾರ್ ಬಾಂಬ್ ದಾಳಿಗೆ 13 ಸೈನಿಕರು ಬಲಿ

Update: 2016-12-17 20:57 IST

ಇಸ್ತಾಂಬುಲ್ (ಟರ್ಕಿ), ಡಿ. 17: ಟರ್ಕಿಯ ಕಾಯ್‌ಸೆರಿ ಪಟ್ಟಣದಲ್ಲಿ ಶನಿವಾರ ನಡೆದ ಕಾರ್‌ಬಾಂಬ್ ಸ್ಫೋಟದಲ್ಲಿ ಟರ್ಕಿಯ 13 ಸೈನಿಕರು ಮೃತಪಟ್ಟಿದ್ದಾರೆ ಹಾಗೂ 48 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.

ಟರ್ಕಿಯ ಮಧ್ಯದ ನಗರದಲ್ಲಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಈ ಸೈನಿಕರಿಗೆ ರಜೆ ಮಂಜೂರಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಸೇನಾ ಪ್ರಧಾನ ಕಚೇರಿಯಿಂದ ಹೊರ ಹೋಗುತ್ತಿದ್ದರು ಎಂದು ಹೇಳಿಕೆಯೊಂದು ತಿಳಿಸಿದೆ.

ಬಸ್ ಹತ್ತಿರಕ್ಕೆ ಬಂದಾಗ ಕಾರಿನಲ್ಲಿದ್ದ ಬಾಂಬ್ ಸ್ಫೋಟಿಸಿತು ಎಂದು ಡೋಗನ್ ವಾರ್ತಾ ಸಂಸ್ಥೆ ತಿಳಿಸಿದೆ.

ಇಸ್ತಾಂಬುಲ್‌ನಲ್ಲಿ ಡಿಸೆಂಬರ್ 10ರಂದು ಫುಟ್ಬಾಲ್ ಪಂದ್ಯವೊಂದರ ಬಳಿಕ ನಡೆದ ಅವಳಿ ಬಾಂಬ್ ಸ್ಫೋಟಗಳಲ್ಲಿ 44 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಆ ದಾಳಿಯ ಹೊಣೆಯನ್ನು ಕುರ್ದಿಶ್ ಉಗ್ರರು ಹೊತ್ತುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News