ಬೈಕ್ -ಸ್ಕಾರ್ಪಿಯೊ ಢಿಕ್ಕಿ : ಓರ್ವ ಬಲಿ
Update: 2016-12-17 21:46 IST
ಬೆಳ್ತಂಗಡಿ, ಡಿ.17 : ಉಜಿರೆ ಸಿದ್ದವನದ ಬಳಿ ಬೈಕ್ ಹಾಗೂ ಸ್ಕಾರ್ಪಿಯೋ ಡಿಕ್ಕಿಯಾಗಿ ಓರ್ವ ಮೃತ ಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಉಜಿರೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸ್ಕಾಪಿಯೋ ವಾಹನಕ್ಕೆ ಸಿದ್ದವನ ಬಳಿ ಬೈಕ್ ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಹೈದರ್‌ಬಾದ್ ಮೂಲದ ಪ್ರಸ್ತುತ ಉಜಿರೆ ಖಾಸಗಿ ಐಟಿ ಕಾಲೇಜಿನ ವಿದ್ಯಾರ್ಥಿ ಗೋಪಿಕೃಷ್ಣ (21) ಢಿಕ್ಕಿ ಹೊಡೆದ ರಭಸಕ್ಕೆ ತಲೆ ಏಟು ಬಿದ್ದು ಮೃತಪಟ್ಟಿದ್ದಾರೆ.
ಬೈಕಿನಲ್ಲಿದ್ದ ಬೆಂಗಳೂರು ಮೂಲದ ಇದೇ ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಪತ್ರಕರ್ತ ಧನಕೀರ್ತಿ ಆರಿಗ ಅವರು ತಮ್ಮ ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಸಹಕರಿಸಿದರು. ಚಂದ್ರಶೇಖರ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.