ಲೆ.ಜನರಲ್ ಬಿಪಿನ್ ರಾವತ್ ಮುಂದಿನ ಆರ್ಮಿ ಮುಖ್ಯಸ್ಥರು
Update: 2016-12-17 22:40 IST
ಹೊಸದಿಲ್ಲಿ, ಡಿ.17: ಲೆಪ್ಪನೆಂಟ್ ಜನರಲ್ ಬಿಪಿನ್ ರಾವತ್ ಅವರು ಮುಂದಿನ ಆರ್ಮಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಡಿ.31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇದೇ ವೇಳೆ ವಾಯುಪಡೆಯ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೊವಾ ನೇಮಕವಾಗಿದ್ದಾರೆ. ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಡಿ.31ರಂದು ನಿವೃತ್ತರಾಗಲಿದ್ದಾರೆ. ಲೆಪ್ಪನೆಂಟ್ ಜನರಲ್ ಬಿಪಿನ್ ರಾವತ್ ,ಏರ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೊವಾ ಜನವರಿ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.