×
Ad

ಹಣದ ವಿಚಾರ: ಕಾರ್ಮಿಕನ ಕೊಲೆ

Update: 2016-12-17 22:52 IST

ಮಂಗಳೂರು, ಡಿ. 17: ಹಣದ ವಿಚಾರಕ್ಕೆ ಸಂಬಂಧಿಸಿ ಹೊಗೆ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವು ಸಾವಿನಲ್ಲಿ ಅಂತ್ಯಗೊಂಡ ಘಟನೆ ಕಣ್ಣೂರಿನಲ್ಲಿ ನಡೆದಿದೆ.

 ಕಣ್ಣೂರು ಮಸೀದಿ ಬಳಿಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರಾದ ಮಾಂತೇಶ ರವಾನಿ (38) ಮತ್ತು ವೀರೇಂದ್ರ ಪ್ರಸಾದ್ (37) ಕೆಲಸ ಮಾಡುತ್ತಿದ್ದರು.

ಡಿ.15ರಂದು ಸಂಜೆ 5 ಗಂಟೆ ಹೊತ್ತಿಗೆ ಹಣದ ವಿಚಾರಕ್ಕೆ ಸಂಬಂಧಿಸಿ ಇಬ್ಬರು ನಡುವೆ ಜಗಳ ನಡೆದು ವೀರೇಂದ್ರ ಎಂಬಾತ ಮಾಂತೇಶನಿಗೆ ರೀಪ್‌ನಿಂದ ಹೊಡೆದಿದ್ದ ಎನ್ನಲಾಗಿದೆ. ತೀವ್ರ ಹೊಡೆತದಿಂದ ಗಂಭೀರ ಗಾಯಗೊಂಡ ಮಾಂತೇಶನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮಾಂತೇಶ ಸಾವನ್ನಪ್ಪಿದ್ದಾನೆ.

ಈ ಸಂಬಂಧ ವೀರೇಂದನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News