×
Ad

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಸಭಾಭವನ ಉದ್ಘಾಟನೆ

Update: 2016-12-17 23:57 IST

ಬೆಳ್ತಂಗಡಿ, ಡಿ.17: ತಾನು ಮಾತ್ರ ಸುಖವಾಗಿದ್ದರೆ ಸಾಲದು, ಇತರರೂ ನೆಮ್ಮದಿಯಿಂದಿರಬೇಕು ಎಂಬ ವಿಶಾಲ ಮನೋಭಾವನೆಯಿಂದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದೇ ಎಲ್ಲ ಧರ್ಮಗಳ ತಿರುಳು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸುಂದರವಾಗಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಸುಮಾರು ಐದು ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಭವ್ಯ ಹಾಗೂ ಸುಸಜ್ಜಿತ ಸೇಕ್ರೆಡ್ ಹಾರ್ಟ್ ಸಭಾಭವನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಮಂಗಳೂರು ಬಿಷಪ್ ಅ.ವಂ.ಡಾ.ಅಲೋಶಿಯಸ್ ಪೌಲ್ ಡಿಸೋಜ, ಜಾತಿ, ಧರ್ಮ, ಮೇಲು ಕೀಳೆಂಬ ಭೇದಭಾವಗಳನ್ನು ಮರೆತು ನಾವೆಲ್ಲರೂ ದೇವರ ಮಕ್ಕಳು, ಸಮಾನರು ಎಂಬ ಭಾವನೆಯೊಂದಿಗೆ ಬದುಕನ್ನು ನಡೆಸುವಂತಾಗಬೇಕು ಎಂದರು.

ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಲಾರೆನ್ಸ್ ಮುಕ್ಕುಯಿ ‘ಡಿವೈನ್ ಗ್ರೇಸ್’ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

 ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಶುಭ ಹಾರೈಸಿದರು.

ಸಂಸದ ನಳಿನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಯವರ ಅಧೀನ ಕಾರ್ಯದರ್ಶಿ ಅರುಣ್ ಫುರ್ಟಾಡೋ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ವಲಯ ಪ್ರಧಾನ ಧರ್ಮಗುರು ಬೊನವೆಂಚರ್ ನಝ್ರೆತ್, ತಾಪಂ ಸದಸ್ಯರಾದ ವಸಂತಿ ಲಕ್ಷ್ಮಣ್, ಜೋಯಲ್ ಗೋಡ್‌ಫ್ರೀ ಮೆಂಡೋನ್ಸಾ, ಸೇಕ್ರೆಡ್ ಹಾರ್ಟ್ ಚರ್ಚ್‌ನ ಸಹಾಯಕ ಧರ್ಮಗುರು ಪ್ರವೀಣ್ ಡಿಸೋಜ, ಸೇ.ಹಾ.ಪ.ಪೂ.ಕಾಲೇಜಿನ ಪ್ರಾಚಾರ್ಯ ಜೆರೋಮ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ರೊನಾಲ್ಡ್ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಡಾ.ಹೆಗ್ಗಡೆ ಹಾಗೂ ಬಿಷಪ್ರನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು.

ಸೇ.ಹಾ.ಜೂ.ಕಾಲೇಜಿನ ಉಪನ್ಯಾಸಕ ಮಧುಕರ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ಸ್ವಾಗತಿಸಿದರು. ಪಾಲನಾ ಸಮಿತಿಯ ಉಪಾಧ್ಯಕ್ಷ ಗ್ರೆಗರಿ ಸೇರಾ ವಂದಿಸಿದರು.

 ಸುಮಾರು 5 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇಕ್ರೆಡ್ ಹಾರ್ಟ್ ಸಭಾಭವನವು 2,500 ಆಸನ ಸಾಮರ್ಥ್ಯವನ್ನು ಹೊಂದಿದೆ. ಕೆನಡಾದಿಂದ ತರಿಸಿ ಅಳವಡಿಸಿರುವ 20 ಅಡಿ ಉದ್ದದ 2 ಫ್ಯಾನ್‌ಗಳು ವಿಶೇಷ ಆಕರ್ಷಣೆಯಾಗಿದೆ.

=ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ವಿವಿಧ ಕಾಮಗಾರಿಗಳಾದ ಕಾಲೇಜು ಮಹಾದ್ವಾರ, ವಾಣಿಜ್ಯ ಸಂಕೀರ್ಣ ॥

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News