ಅರಿವಳಿಕೆ ಇಲ್ಲ: ಆಪರೇಷನ್ ವೇಳೆ ಮಗು ಕುರ್‌ಆನ್ ಪಠಿಸುತ್ತಿದೆ ಎನ್ನುತ್ತಾ ಅತ್ತೇಬಿಟ್ಟ ಸುದ್ದಿ ವಾಚಕ

Update: 2016-12-18 11:49 GMT

ಅಲೆಪ್ಪೊ,ಡಿ.18: ಸಿರಿಯದ ನಗರ ಅಲೆಪ್ಪೊದಲ್ಲಿ ಜನರ ನರಮೇಧ ಮುಂದುವರಿದಿದ್ದು, ಕರುಳು ಚುರ್‌ಗುಟ್ಟುವ ಇನ್ನೊಂದು ಸುದ್ದಿ ಅಲ್ಲಿಂದ ವರದಿಯಾಗಿದೆ. ಗಾಯಗೊಂಡು ಆಸ್ಪತ್ರೆಗೆ ಕರೆತರಲಾದ ಐದು ವರ್ಷದ ಮಗುವಿನ ಶಸ್ತ್ರಕ್ರಿಯೆಗಾಗಿ ಅರಿವಳಿಕೆ ಲಭಿಸದ್ದರಿಂದ ಶಸ್ತ್ರಕ್ರಿಯೆ ನಡೆಸುವ ವೇಳೆ ಮಗು ಪವಿತ್ರ ಕುರ್‌ಆನ್ ಪಠಿಸುತ್ತಿದೆ ಎನ್ನುವ ಸುದ್ದಿಯನ್ನು ಓದಿದ ಟರ್ಕಿಯ ಟಿವಿ ವಾರ್ತಾ ವಾಚಕರು ಗಳಗಳನೆ ಅತ್ತ ವೀಡಿಯೊ ದೃಶ್ಯ ಇದೀಗ ಬಹಿರಂಗವಾಗಿದೆ. ಆದರೆ, ಯಾವಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ದೃಢವಾಗಿಲ್ಲ. ಇದೇ ವೇಳೆ, ಯುದ್ಧಗ್ರಸ್ತ ಅಲೆಪ್ಪೊದಲ್ಲಿ ಸಿರಿಯ ಮತ್ತು ರಷ್ಯದ ಸೈನಿಕರು ಮಾನವೀಯ ನೆರವು ಹಾಗೂ ರಕ್ಷಣಾ ಕಾರ್ಯಕ್ಕೆ ಧಾವಿಸುತ್ತಿರುವ ಸ್ವಯಂ ಸೇವಕರನ್ನು ತಡೆಯುತ್ತಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ ಎಂದು ವರದಿಯಾಗಿದೆ.

 ಸಿರಿಯದ ಇದ್‌ಲಿಬ್ ಪ್ರಾಂತ ಸಹಿತ ಶಿಯಾ ನಗರಗಳಾದ ಅಲ್‌ಫೌಲ-ಕೆಫ್‌ರಿಯಗಳಲ್ಲಿರುವ ಗಾಯಾಳುಗಳನ್ನು ಬೇರೆಡೆಗೆ ಹಸ್ತಾಂತರಿಸಿದ ಬಳಿಕ ಅಲೆಪ್ಪೊದ ನಾಗರಿಕರನ್ನು ಬೇರೆಡೆ ಹಸ್ತಾಂತರಿಸಬೇಕೆಂದು ಸಿರಿಯನ್ ಸೈನ್ಯ ಹಟಹಿಡಿದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News