×
Ad

ಆರು ಭಾಷೆಗಳ ಆಲ್ಬಮ್ ಬಿಡುಗಡೆಗೊಳಿಸಿದ ಇಂಡೋ-ಅಮೆರಿಕನ್ ಬಾಲಕಿ

Update: 2016-12-18 15:19 IST

ಹ್ಯೂಸ್ಟನ್, ಡಿ.18: ಭಾರತೀಯ ಅಮೆರಿಕನ್ ಬಾಲಕಿ ತಿಯಾರ ತಂಗಂ ಅಬ್ರಹಾಂ ಆರು ಭಾಷೆಗಳಲ್ಲಿ 9 ವರ್ಲ್ಡ್ ಹಾಲಿಡೇ ಗೀತೆಗಳ ಸಂಗ್ರಹವಿರುವ ತನ್ನ ಮೊದಲ ಆಲ್ಬಮ್‌ನ್ನು ಬಿಡುಗಡೆಗೊಳಿಸಿದ್ದಾರೆ.

  10ರ ಹರೆಯದ ತಿಯಾರ ಏಳನೆ ವಯಸ್ಸಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಆಕೆಯ ಹಿರಿಯ ಸಹೋದರಿ ತನಿಷ್ಕಾ ಅಬ್ರಹಾಂ ಲೈಫ್‌ಟೈಮ್ ರಿಯಾಲಿಟಿ ಶೋ ‘ಚೈಲ್ಡ್ ಜೀನಿಯಸ್’ನಲ್ಲಿ ಸ್ಪರ್ಧಾಳುವಾಗಿದ್ದರು.

‘ವಿಂಟರ್ ನೈಟಿಂಗಲ್’ ಹೆಸರಿನ ಆಲ್ಬಮ್‌ನಲ್ಲಿ ಕೆಲವು ಕ್ಲಾಸಿಕ್ ಕಾರ್ಲೊಸ್ ಹಾಗೂ ಹಾಲಿಡೇ ಸಾಂಗ್ಸ್‌ಗಳನ್ನು ಇಂಗ್ಲೀಷ್, ಸ್ಪೇನೀಶ್, ಇಟಲಿಯನ್ ಜರ್ಮನ್, ಲ್ಯಾಟಿನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಹಾಡಿದ್ದಾರೆ.

ತಿಯಾರ ತಂಗಂ ಅಬ್ರಹಾಂರ ಅಜ್ಜ-ಅಜ್ಜಿ ಚಿಕ್ಕಂದಿನಲ್ಲೇ ಭಾರತದ ಕೇರಳ ರಾಜ್ಯದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಟಿಯಾರ ಕ್ಯಾಲಿಫೋರ್ನಿಯದ ಅಮೆರಿಕನ್ ರಿವರ್ ಕಾಲೇಜ್‌ನಲ್ಲಿ ದಾಖಲಾಗಿದ್ದಾರೆ. ಇದೇ ಶಾಲೆಯಲ್ಲಿ ಟಿಯಾರ ಸಹೋದರ 2015ರಲ್ಲಿ ಪದವಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News