×
Ad

ಕಂಕನಾಡಿ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ಹಾವಳಿ

Update: 2016-12-18 15:49 IST

ಮಂಗಳೂರು, ಡಿ.18: ಕಂಕನಾಡಿ ಮುಖ್ಯ ರಸ್ತೆಯ ಬದಿಯ ಮನಪಾ ಗುರುತಿಸಿದ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ಹಾವಳಿ ಮಿತಿ ಮೀರಿದೆ. ಇದರಿಂದ ಬಸ್‌ಗಳ ನಿಲುಗಡೆಗೆ, ಪ್ರಯಾಣಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಜೊತೆಗೆ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೂ ತೊಂದರೆಯಾಗಿದೆ.

ಈ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ನಿಷೇಧವಿದೆ. ಏನಿದ್ದರೂ ಬಸ್‌ಗಳು ನಿಲುಗಡೆಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮನಪಾ ಕೂಡ ಸೂಚನಾ ಫಲಕ ಹಾಕಿದೆ. ಆದರೆ, ಅವನ್ನೆಲ್ಲಾ ಮೀರಿ ಇಲ್ಲಿ ಸವಾರರು ಪುಕ್ಕಟೆಯಾಗಿ ತಮ್ಮ ದ್ವಿಚಕ್ರ ವಾಹನವನ್ನು ಇಲ್ಲಿ ನಿಲ್ಲಿಸುವ ಮೂಲಕ ಮನಪಾಕ್ಕೆ ಸವಾಲೊಡ್ಡುತ್ತಿದ್ದಾರೆ.

ಪ್ರತಿನಿತ್ಯ ಇಲ್ಲಿ ನೂರಾರು ಸವಾರರು ಇಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸುತ್ತಿದ್ದರೂ ಕೂಡ ಸಂಚಾರ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲು ಆಸಕ್ತಿ ವಹಿಸುತ್ತಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರಿ ರಜಾದಿನವಾದ ರವಿವಾರ ಕೂಡ ಇಲ್ಲಿ ನೂರಾರು ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಸಂಚಾರ ನಿಮಯವನ್ನು ಉಲ್ಲಂಘಿಸಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News