ಮುಲ್ಕಿ : ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಮದರಸದಲ್ಲಿ ಮಕ್ಕಳ ಪ್ರತಿಭಾ ಕಾರ್ಯಕ್ರಮ
ಮುಲ್ಕಿ, ಡಿ.18: ಮೀಲಾದುನ್ನಬಿಯ ಪ್ರಯುಕ್ತ ಇಲ್ಲಿನ ಹಳೆಯಂಗಡಿ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಮದರಸದಲ್ಲಿ ಮಕ್ಕಳ ಪ್ರತಿಭಾ ಕಾರ್ಯಕ್ರಮ ರವಿವಾರ ಸಂತೆಕಟ್ಟೆ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
ಸಮಾರಂಭವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರೆಹಮಾನ್ ಫೈಝಿ ವಹಿಸಿದ್ದರು. ಶೈಖುನಾ ಅಲ್‌ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನೆ ಗೈದರು.
ಇದೆ ವೇಳೆ ವಿವಿಧ ಸ್ಫರ್ಧಾ ಕೂಟಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು.
ಹಳೆಯಂಗಡಿ ಕದಿಕೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಾಗ್, ಸಂತೆಕಟ್ಟೆ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ದಾರಿಮಿ, ಸಾಹುಲ್ ಹಮೀದ್ ಸಂತೆಕಟ್ಟೆ, ಇಂದಿರಾ ನಗರ ಮದರಸದ ಹನೀಫ್ ದಾರಿಮಿ ಅಂಕೋಲಾ, ಹಬೀಬುರ್ರಹ್ಮಾನ್, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಇಮಾಯತುಲ್ ಇಸ್ಲಾಮ್ ಮದರಸ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಅಬ್ದುಲ್ ರಝಾಕ್ ಕಜಕತೋಟ, ರಶೀದ್ ಮುಸ್ಲಿಯಾರ್ ಸಂತೆಕಟ್ಟೆ, ವೌಲಾನಾ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.