ವಿಕಲಚೇತನರಿಗೆ ಸಲಕರಣೆ ವಿತರಣೆ

Update: 2016-12-18 14:55 GMT

ಪುತ್ತೂರು, ಡಿ.18 : ವಿಕಲಚೇತನರಿಗಾಗಿ ಸರ್ಕಾರದ ಶೆ.3 ಅನುದಾನ ಮೀಸಲಾಗಿದ್ದು, ಅದು ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಅವರಿಗೆ ಆದ್ಯತೆಯ ಸ್ಥಾನಮಾನ ಸಿಗುವಂತಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ಭಾನುವಾರ ನಡೆದ ವಿಕಲ ಚೇತನರಿಗೆ ಉಚಿತ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದಿಂದ ವಿಕಲಚೇತನರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಅವರ ಬದುಕಿಗೆ ಧೈರ್ಯ ತುಂಬಿಸುವ ಕೆಲಸವಾಗಬೇಕು ಎಂದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ,  ವಿಕಲಚೇತನರಿಗೂ ಎಲ್ಲರಂತೆ ಜೀವಿಸುವ ಹಕ್ಕಿದ್ದು, ಅವರ ಭಾವನೆಗಳಿಗೆ ಗೌರವ ನೀಡುವ ಜೊತೆಗೆ ಅವರಿಗೆ ನೆರವು ನೀಡುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಗೌಡ, ಡಾ. ರಾಜೇಶ್, ಸೋಭಾ. ಡಾ. ಕೆ.ಆರ್. ಕಾಮತ್ ಮತ್ತಿತರರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News