ಅನಿವಾಸಿ ಭಾರತೀಯ ಸಂಕಷ್ಟ ಪರಿಹಾರ ಕುರಿತ ಸಭೆ

Update: 2016-12-18 16:31 GMT

ಮಂಗಳೂರು, ಡಿ. 18: ಅರಬ್ ರಾಷ್ಟಗಳ ಸಹಿತ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರ ಸಮಸ್ಯೆ ಹಾಗೂ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಡಾ.ಆರತಿಕೃಷ್ಣನ್ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಅರಬ್ ಅಥವಾ ಇತರ ದೇಶಗಳಲ್ಲಿ ಕಂಪೆನಿ ವ್ಯಾಪಾರ ಮಳಿಗೆ ಹೊಂದಿರುವ ಮಾಲಕರು ಮತ್ತು ಉದ್ಯೋಗಿಗಳು ರಾಜ್ಯ ಮತ್ತು ದೇಶಕ್ಕೆ ಅನನ್ಯ ಸೇವೆಯನ್ನು ನೀಡಿದ್ದು, ಅವರನ್ನು ಗುರುತಿಸಿ ಗೌರವಿಸು ಕೆಲಸ ನಡೆಯಬೇಕೆಂದು ಚರ್ಚಿಸಲಾಯಿತು.

ಅನಿವಾಸಿ ಭಾರತೀಯರಾದ ಝಕಾರಿ ಹಸನ್ ಶಾಹಿದ್ ಮುಹಮ್ಮದ್ ಅಸೀನ್ ಅವರು,  ಅರಬ್ ದೇಶದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯವರು ಸಂಬಳ ಸಿಗದೆ ಕಷ್ಟದಲ್ಲಿದ್ದಾರೆ. ಉದ್ಯೋಗವನ್ನು ತೊರೆದು ಭಾರತಕ್ಕೆ ಮರಳಲು ಸಾಧ್ಯವಾಗದೆ ಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಸಭೆಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಆರತಿ ಕೃಷ್ಣನ್ ಅವರು, ಜಿಲ್ಲೆಯಲ್ಲಿ ಅನಿವಾಸಿ ಭಾರತೀಯ ಸಂಘವನ್ನು ಸರಕಾರೇತರ ಮುಂದಾಳತ್ವದಲ್ಲಿ ರಚಿಸಿ ಅದರ ಮುಖಾಂತರ ಜಿಲ್ಲೆಯ ಅನಿವಾಸಿ ಭಾರತೀಯರ ಸಮಸ್ಯೆಗಳ ಮಾಹಿತಿಯನ್ನು ಕ್ರೋಢೀಕರಿಸಿ ಅನಿವಾಸಿ ಭಾರತೀಯ ಸಮಿತಿಯ ಗಮನ ಸಳೆದು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News