×
Ad

ಬಂಟ್ವಾಳ : ತಾಲೂಕು ಮಟ್ಟದ ಯುವಜನ ಮೇಳ

Update: 2016-12-18 23:13 IST

ವಿಟ್ಲ , ಡಿ. 18 : ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಸೇವೆ ನಡೆಸಲು ಪ್ರತಿಯೊಬ್ಬರು ಮುಂದಾಗಬೇಕು. ತಮ್ಮೊಳಗಿನ ಕಲೆ, ಸಾಮರ್ಥ್ಯವನ್ನು ಹೊರ ಹಾಕುವ ಮೂಲಕ ಜನ ಮೆಚ್ಚುಗೆಯನ್ನು ಗಳಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಗೌರವಾದರದ ಮೂಲಕ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದು ಪುತ್ತೂರು ಶಾಸಕಿ ಶಕುಂತಾಳ ಟಿ. ಶೆಟ್ಟಿ ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯತ್, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳ 2016-17 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಮಾತನಾಡಿ , ಸುಶಿಕ್ಷಿತ ಯುವ ಶಕ್ತಿ ಐಟಿ ಬಿಟಿಯಲ್ಲಿ ತಲ್ಲೀನರಾಗಿದ್ದು, ಸಾಮಾಜಿಕ ಚಟುವಟಿಕೆಗಳಿಂದ ಹಿಂದುಳಿದಿದ್ದಾರೆ. ಊರಿನ ಶ್ರೇಯೋಭಿವೃದ್ಧಿಗೆ ಯುವ ಸಮುದಾಯವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಅಗತ್ಯವಿದೆ. ಯುವ ಪ್ರತಿಭೆಗಳನ್ನು ಪ್ರಕಾಶಿಸುವುದರಿಂದರೊಂದಿಗೆ ಸುದೃಢ ಯುವ ಸಂಘಟನೆಗಳನ್ನು ಬೆಳೆಸಲು ಯುವಜನ ಮೇಳಗಳು ಪೂರಕವಾಗಿದೆ ಎಂದರು.

ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು ಮಾತನಾಡಿ,  ಹಾದಿ ತಪ್ಪುವ ಯುವ ಸಮಾಜವನ್ನು ಮನ ಪರಿವರ್ತನೆಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಿಕ ಚಟುವಟಿಕೆಯಲ್ಲಿ ಯುವ ಜನತೆಯನ್ನು ಹೆಚ್ಚು ಭಾಗವಹಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಯುವಕ-ಯುವತಿ ಮಂಡಲ ಬೆಳೆಯಲು ಯುವಜನ ಮೇಳ ಪೂರಕವಾಗಿದೆ ಎಂದವರು ತಿಳಿಸಿದರು.

ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ಯುವಕರು ಸಾಮರಸ್ಯದ ಜತೆಗೆ ಸಂಘಟತ್ಮಾಕ ಕಾರ್ಯಗಳನ್ನು ನಡೆಸಿದಾಗ ಊರಿನ ಪ್ರಗತಿ ಸಾಧ್ಯವಿದೆ. ಯುವಕ ಮಂಡಲದಲ್ಲಿ ಕಾರ್ಯನಿರ್ವಹಿಸುವುದರಿಂದ ಜಾತ್ಯಾತೀತ ಮನೋಭಾವ ಬೆಳೆಯುತ್ತದೆ. ಕಾರ್ಯಕ್ರಮಗಳನ್ನು ಆಸಕ್ತಿ ವಹಿಸಿ ಜವಾಬ್ದಾರಿಯಿಂದ ನಡೆಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದರು.

ಸ್ಥಾಪಕಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಸ್ಥಾಪಕ ಕಾರ್ಯದರ್ಶಿ ಮಹಮ್ಮದ್ ಬಿಕಾಂ, ರಾಘವ ಪೂಜಾರಿ ಹಿತ್ತಿಲು, ಎಂ.ಎಸ್. ಮಹಮ್ಮದ್, ಮುರಳೀಧರ ರೈ, ಮಾದೋಡಿ, ಸುರೇಶ್ ಗೌಡ ಓಟೆತ್ತಟ್ಟ, ದಿನಕರ ರೈ ಬೈಲುಗುತ್ತು, ತೀರ್ಥಾನಂದ ಗೌಡ ಬಾಳೆಕುಮೇರಿ ಅವರನ್ನು ಸನ್ಮಾನಿಸಲಾಯಿತು.

ನಿಕಟ ಪೂರ್ವಾಧಕ್ಷರಾದ ಲಲಿತ ಎನ್. ನಾಯ್ಕ ಅಜ್ಜಿನಡ್ಕ, ನಯನ, ರಾಮಕೃಷ್ಣ ಭಟ್ ಬಳಂತಿಮೊಗೆರು, ಪವಿತ್ರ, ಉದಯಕುಮಾರ್ ದಂಬೆ, ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯರಾದ ಕವಿತಾ ಎನ್. ನಾಕ್, ವೆಂಕಟೇಶ್ ಕುಮಾರ್ ಬದಿಕೋಡಿ, ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಪುಣಚ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪ್ರೇಮಲತಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಬಂಟ್ವಾಳ ಯುವಜನ ಒಕ್ಕೂಟದ ಗೌರವಾಧ್ಯಕ್ಷ ತಿಮ್ಮಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ನವೀನ್ ಪಿ.ಎಸ್. ಸ್ವಾಗತಿಸಿ, ರೇಶ್ಮಾ ಎಚ್. ಪ್ರಾರ್ಥಿಸಿದರು.

ಬಂಟ್ವಾಳ ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಪ್ರಸ್ತಾವನೆಗೈದರು.

ಪುಣಚ ಯುವಕ ಮಂಡಲ ಅಧ್ಯಕ್ಷ ರೋಶನ್ ಟೆಲ್ಲಿಸ್ ವಂದಿಸಿದರು. ಶಫಿಕ್ ಎಂ.ಎಸ್., ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News