×
Ad

ಉಡುಪಿ ಕಿಶೋರ ಯಕ್ಷ ಸಂಭ್ರಮ ಸಮಾರೋಪ

Update: 2016-12-18 23:43 IST

ಉಡುಪಿ, ಡಿ.18: ಯಕ್ಷಗಾನ ಕಲೆಯು ಮಕ್ಕಳ ಬೌದ್ಧಿಕ, ಸಾಂಸ್ಕೃತಿಕ, ಜಾನಪದ ಪ್ರಗತಿಗೆ ಕಾರಣವಾಗುವುದಲ್ಲೆ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಶಕ್ತಿಗೆ ಪೂರಕವಾಗಿದೆ. ಆದುದರಿಂದ ಪ್ರತಿಯೊಂದು ಶಾಲೆಯಲ್ಲಿ ಯಕ್ಷಗಾನ ಕಲಿಸುವ ಕೆಲಸ ಆಗಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಜರಗಿದ ಕಿಶೋರ ಯಕ್ಷ ಸಂಭ್ರಮ ಉಡುಪಿ ಪ್ರದರ್ಶನಗಳ ಸಮಾ ರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡುತಿದ್ದರು.

ಟ್ರಸ್ಟ್‌ಗೆ ಕಳೆದ ಹಲವು ವರ್ಷಗಳಿಂದ ಸರಕಾರವು ವಾರ್ಷಿಕ ಆರು ಲಕ್ಷ ರೂ. ಅನುದಾನ ನೀಡುತ್ತಿದೆ. ಅಂಕ ಗಳಿಸುವ ಉದ್ದೇಶದಿಂದ ಬಹುತೇಕ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಗೂ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತಿಲ್ಲ. ಆದರೆ ಈ ಎರಡು ಕ್ಷೇತ್ರಗಳಲ್ಲಿ ತೊಡ ಗಿಸಿಕೊಂಡ ಮಕ್ಕಳು ಉತ್ತಮ ಅಂಕ ಗಳಿಸುತ್ತಾರೆಯೇ ಹೊರತು ಅನು ತ್ತೀರ್ಣರಾಗುವುದಿಲ್ಲ. ಈ ಬಗ್ಗೆ ಶಾಲಾ ಮುಖ್ಯಸ್ಥರಿಗೆ ಮನವರಿಕೆ ಮಾಡ ಲಾಗುವುದು ಎಂದರು.

ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕಲಾವಿದ, ಯಕ್ಷಗಾನ ಗುರು ರಾಜೀವ ತೋನ್ಸೆ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News