×
Ad

ತಾಳಮದ್ದಳೆಯಿಂದ ದೇಶದ ಪರಂಪರೆಯ ಪರಿಚಯ: ವೈದೇಹಿ

Update: 2016-12-18 23:48 IST

ಉಡುಪಿ, ಡಿ.18: ಭಾರತದ ವಿಶಿಷ್ಟ ಕಲಾ ಪ್ರಕಾರವಾದ ತಾಳಮದ್ದಳೆ ಯಿಂದ ದೇಶದ ಪರಂಪರೆ ಹಾಗೂ ಇತಿಹಾಸ ತಿಳಿಯಲು ಸಾಧ್ಯ ಎಂದು ಸಾಹಿತಿ, ಮಣಿಪಾಲ ವಿವಿಯ ಡಾ.ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಪೀಠದ ಅಧ್ಯಕ್ಷೆ ವೈದೇಹಿ ಹೇಳಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯದ ಡಾ.ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಲಾದ ‘ಕೇಳು ಕುಂತೀ ಕತೆಯ...’ ತಾಳಮದ್ದಳೆ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ತಾಳಮದ್ದಲೆ ಅತ್ಯಂತ ಸ್ಪಷ್ಟವಾಗಿ ಕನ್ನಡ ಭಾಷೆಯ ಸಂಪರ್ಕವನ್ನು ಮಾಡಿ ಕೊಡುತ್ತದೆ. ತಾಳಮದ್ದಳೆ ಕೇವಲ ಕಥೆಯಲ್ಲ. ಅದು ಕಥೆಯೊಳಗಿನ ಕಥೆ ಯಾಗಿದೆ. ಕಥೆಯ ಬಗ್ಗೆ ಚರ್ಚೆ, ಟೀಕೆ, ಟಿಪ್ಪಣಿ, ವಿಮರ್ಶೆ ಹೀಗೆ ಬಹು ಆಯಮಾಗಳನ್ನು ಒಗ್ಗೂಡಿಸಿ ಕಥೆಯ ರೂಪದಲ್ಲಿ ಪ್ರೇಕ್ಷಕನಿಗೆ ನೀಡುವ ಕೆಲಸ ತಾಳಮದ್ದಳೆ ಮಾಡುತ್ತದೆ. ಇದು ಸಮಾಜದ ಉಳುಕು, ಒಳ್ಳೆತನವನ್ನು ನೈಜವಾಗಿ ಕಟ್ಟಿಕೊಡುತ್ತದೆ ಎಂದರು.

ಪೀಠದ ನಿರ್ದೇಶಕ ಪ್ರೊ.ವರದೇಶಿ ಹಿರೇಗಂಗೆ ಉಪಸ್ಥಿತರಿದ್ದರು.

ತಾಳ ಮದ್ದಳೆಯ ಭಾಗವತರಾಗಿ ಗಣಪತಿ ಭಟ್, ಮದ್ದಳೆಯಲ್ಲಿ ಎನ್.ಜಿ. ಹೆಗಡೆ, ಅರ್ಥಧಾರಿಗಳಾಗಿ ಪ್ರೊ.ಎಂ.ಎಲ್.ಸಾಮಗ, ಜಬ್ಬಾರ್ ಸಮೊ, ವಾಸುದೇವ ರಂಗಾಭಟ್ಟ, ಪ್ರಶಾಂತ ಬೇಳೂರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News