ಮನಪಾದ ಪ್ರತೀ ವಾರ್ಡ್‌ನಲ್ಲೂ ಉದ್ಯಾನವನದ ನಿರ್ಮಾಣ: ಬಾವ

Update: 2016-12-18 18:20 GMT

 ಮಂಗಳೂರು, ಡಿ.18: ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಹಸಿರೀಕರಣ ಮಾಡುವ ಹಿನ್ನೆಲೆಯಲ್ಲಿ ಪ್ರತೀ ವಾರ್ಡ್‌ನಲ್ಲೂ ಸರಕಾರಿ ಉದ್ಯಾನವನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಮೊಯ್ದಿನ್ ಬಾವ ಹೇಳಿದರು.

ಕೋಡಿಕಲ್‌ನ ಕಲ್ಲಕಂಡದಲ್ಲಿ ಸುಮಾರು 5.15 ಎಕರೆ ಪ್ರದೇಶದಲ್ಲಿ ನಿರ್ಮಾಣ ಗೊಳ್ಳಲಿರುವ ಉದ್ಯಾನವನ, ಆಟದ ಮೈದಾನ ಕಾಮಗಾರಿಗೆ ರವಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ಹೊಸಬೆಟ್ಟು, ಕಾಟಿಪಳ್ಳ, ಸುರತ್ಕಲ್ ಮತ್ತಿತರ ಪ್ರದೇಶದಲ್ಲಿ ಉದ್ಯಾನವನ, ಕೊಳ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದ್ದು, ಕದ್ರಿ ಹೊರತಾಗಿ ಇತರ ವಾರ್ಡ್‌ಗಳಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಕ್‌ಗಳ ಅಗತ್ಯವಿದೆ. ಕಲ್ಲಕಂಡಕ್ಕೆ 1ಕೋ.ರೂ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಆರು ತಿಂಗಳ ಒಳಗಾಗಿ ಉದ್ಯಾನವನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮೇಯರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮುಡಾ ಸದಸ್ಯ ಕೇಶವ ಸನಿಲ್, ಮನಪಾ ಸದಸ್ಯ ಹರೀಶ್ ಶೆಟ್ಟಿ, ಶಕುಂತಳಾ ಕಾಮತ್, ದಯಾಮಣಿ ಕೋಟ್ಯಾನ್, ಮಮತಾ ಶೆಟ್ಟಿ, ಎಸ್‌ಎನ್‌ಡಿಪಿಯ ಪುರುಷೋತ್ತಮ ಪೂಜಾರಿ, ಮಹಾಬಲ ಚೌಟ, ಗೋಪಾಲ ಕೋಟ್ಯಾನ್, ಬಾಲಕೃಷ್ಣ ಕುಂದರ್, ಸೀತಾರಾಮ ಆಲಗುಡ್ಡೆ, ದೇವದಾಸ್ ಬಂಗೇರ, ವಿಶ್ವನಾಥ್ ಬಂಗೇರ, ಮಹೇಶ್ ಕೋಡಿಕಲ್, ಪಾಂಡುರಂಗ ಕುಕ್ಯಾನ್, ಪ್ರಕಾಶ್ ಕುಂದರ್, ಇಂಜಿನಿಯರ್ ರವಿಶಂಕರ್, ಲತಾ ಜಿ., ನಿತ್ಯಾನಂದ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News