ಬಂಟರ ಪಾಲಿಗೆ ವಸತಿ ನಿಲಯಗಳೆಂದರೆ ದೊಡ್ಡ ಶಕ್ತಿ: ರೈ

Update: 2016-12-18 18:21 GMT

ಸುಳ್ಯ, ಡಿ.18: ಬಂಟರ ಯಾನೆ ನಾಡವರ ಸಂಘ ಸುಳ್ಯ ತಾಲೂಕು, ಸುಳ್ಯ ನಗರ ಹಾಗೂ ಜಾಲ್ಸೂರು ವಲಯ ಇವಿಗಳ ಆಶ್ರಯದಲ್ಲಿ ಬಂಟರ ಸಮಾವೇಶವು ಕೇರ್ಪಳದ ಬಂಟರ ಸಂಘದ ನಿವೇಶನದಲ್ಲಿ ನಡೆಯಿತು. ಇದೇ ಸಂದರ್ಭ ಬಂಟರ ಭವನ ಶಿಲಾನ್ಯಾಸ ಹಾಗೂ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮ ಜರಗಿತು. ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಂಟರ ಪಾಲಿಗೆ ವಸತಿ ನಿಲಯಗಳೆಂದರೆ ದೊಡ್ಡ ಶಕ್ತಿ. ಬಂಟರು ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದಿದ್ದರೆ ಅದಕ್ಕೆ ಹಾಸ್ಟೆಲ್‌ಗಳೇ ಕಾರಣ. ಬಂಟರ ಭವನಕ್ಕೆ ಸರಕಾರದಿಂದ ಅನುದಾನ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಅಮರನಾಥ್ ಶೆಟ್ಟಿ ಬಂಟರ ಭವನದ ಶಿಲಾನ್ಯಾಸ ನೆರವೇರಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್ ಅಂಗಾರ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಚೆನ್ನಕೇಶವ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ, ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವು ಮುಖ್ಯ ಅತಿಥಿಗಳಾಗಿದ್ದರು.

ಬಂಟರ ಯಾನೆ ನಾಡವರ ಸಂಘದ ಗೌರವಾಧ್ಯಕ್ಷ ಪಿ.ಬಿ. ದಿವಾಕರ ರೈ, ಕಾರ್ಯದರ್ಶಿ ಬಿ. ಸುಭಾಶ್ಚಂದ್ರ ರೈ , ಖಜಾಂಜಿ ಎಸ್. ಗಂಗಾಧರ್ ರೈ, ಮಹಿಳಾ ಸಂಘದ ಅಧ್ಯಕ್ಷೆ ಪ್ರಪುಲ್ಲ ಪದ್ಮನಾಭ ರೈ, ಯುವ ಬಂಟರ ಸಂಘದ ಅಧ್ಯಕ್ಷ ಪ್ರೀತಮ್ ರೈ, ಸುಳ್ಯ ವಲಯ ಬಂಟರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು, ಜಾಲ್ಸೂರು ವಲಯದ ಅಧ್ಯಕ್ಷ ಕೆ.ಎನ್. ದಿವಾಕರ್ ರೈ, ಮಾತೃ ಸಂಘದ ನಿರ್ದೇಶಕಿ ರಾಜೀವಿ ಆರ್.ರೈ ಉಪಸ್ಥಿತರಿದ್ದರು.

ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಸ್ವಾಗತಿಸಿದರು. ಬೂಡು ರಾಧಾಕೃಷ್ಣ ರೈ, ರೂಪಶ್ರೀ ಜೆ. ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News