×
Ad

ಪಾಕ್: 2 ವರ್ಷಗಳಲ್ಲಿ 419 ಮಂದಿಗೆ ಮರಣದಂಡನೆ

Update: 2016-12-19 00:16 IST

 ಇಸ್ಲಾಮಾಬಾದ್, ಡಿ.18: ಕಳೆದ ಎರಡು ವರ್ಷಗಳಲ್ಲಿ 419 ಮಂದಿಯನ್ನು ಮರಣದಂಡನೆಗೊಳಪಡಿಸುವ ಮೂಲಕ ಪಾಕಿಸ್ತಾನವು ಜಗತ್ತಿನಲ್ಲೇ ಮರಣದಂಡನೆ ವಿಧಿಸುವ ರಾಷ್ಟ್ರಗಳ ಸಾಲಿನಲ್ಲಿ ಮೂರನೆ ಸ್ಥಾನದಲ್ಲಿದೆಯೆಂದು ಮಾನವಹಕ್ಕುಗಳ ಗುಂಪೊಂದು ರವಿವಾರ ಬಹಿರಂಗಪಡಿಸಿದೆ.

  2014ರಲ್ಲಿ ಪೇಶಾವರ್‌ನಲ್ಲಿ ಸೇನೆ ನಡೆಸುತ್ತಿರುವ ಶಾಲೆಯೊಂದರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 154 ಮಂದಿ ಸಾವನ್ನಪ್ಪಿದ ಘಟನೆಯ ಬಳಿಕ ಪಾಕಿಸ್ತಾನವು ಮರಣದಂಡನೆಗಳಿಗೆ ಕಳೆದ ಆರು ವರ್ಷಗಳಿಂದ ತಾನು ವಿಧಿಸಿದ್ದ ತಡೆಯಾಜ್ಞೆಯನ್ನು ರದ್ದುಪಡಿಸಿತ್ತು.

ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನವು ಭಯೋತ್ಪಾದನೆ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿ 419 ಮಂದಿ ಕೈದಿಗಳನ್ನು ಗಲ್ಲಿಗೇರಿಸಿದೆಯೆಂದು ಜಸ್ಟೀಸ್ ಪ್ರಾಜೆಕ್ಟ್ ಪಾಕಿಸ್ತಾನ್ (ಜೆಪಿಪಿ)ನ ಕಾರ್ಯನಿರ್ವಾಹಕ ನಿರ್ದೇಶಕ ಸಾರಾ ಬಿಲಾಲ್ ತಿಳಿಸಿದ್ದಾರೆ.

ಜಗತ್ತಿನಲ್ಲಿ ಮರಣದಂಡನೆ ವಿಧಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಇರಾನ್, ಪಾಕಿಸ್ತಾನ, ಸೌದಿ ಅರೇಬಿಯ ಹಾಗೂ ಅಮೆರಿಕ ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಆಲಂಕರಿಸಿವೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News