×
Ad

ಪಾಕ್: ಬಾಲಿವುಡ್ ಚಿತ್ರಗಳ ಮೇಲಿನ ನಿಷೇಧ ರದ್ದು

Update: 2016-12-19 00:16 IST

ಇಸ್ಲಾಮಾಬಾದ್,ಡಿ.18: ಉರಿ ದಾಳಿಯ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಾಲಿವುಡ್ ಚಿತ್ರಗಳಿಗೆ ವಿಧಿಸಿದ್ದ ನಿಷೇಧವನ್ನು ಇಸ್ಲಾಮಾಬಾದ್ ಹಿಂತೆಗೆದುಕೊಂಡಿದೆ.

 ಸೋಮವಾರದಿಂದ ಪಾಕ್‌ನಾದ್ಯಂತ ಚಿತ್ರಮಂದಿರಗಳಲ್ಲಿ ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆಯೆಂದು ‘ಡಾನ್‌ಆನ್‌ಲೈನ್’ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

ಭಾರತದಲ್ಲಿ ಪಾಕ್ ಕಲಾವಿದರನ್ನು ನಿಷೇಧಿಸಿರುವುದನ್ನು ಪ್ರತಿಭಟಿಸಿ ಸೆಪ್ಟಂಬರ್ 30ರಂದು ಪಾಕಿಸ್ತಾನದ ಚಿತ್ರಮಂದಿರಗಳ ಮಾಲಕರ ಒಕ್ಕೂಟವು ಭಾರತೀಯ ಚಿತ್ರಗಳ ಪ್ರದರ್ಶನವನ್ನು ಅನಿರ್ದಿಷ್ಟಾವಧಿಯವರೆಗೆ ನಿಷೇಧಿಸಿತ್ತು. ಜಮ್ಮುಕಾಶ್ಮೀರದ ಉರಿ ನಗರದ ಸೇನಾನೆಲೆಯಲ್ಲಿ ನಡೆದ ದಾಳಿಯಲ್ಲಿ 19 ಮಂದಿ ಸೈನಿಕರು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ಚಿತ್ರರಂಗವು ಪಾಕ್ ಕಲಾವಿದರನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News