ಎಕ್ಕೂರು ತೋಚಿಲ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ
ಮಂಗಳೂರು, ಡಿ.19: ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿ ಸಹಿತ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಕಂಕನಾಡಿ ಬಿ. ವಾರ್ಡ್‌ನ ಎಕ್ಕೂರು ತೋಚಿಲ ಮುಖ್ಯ ರಸ್ಯೆ ನಿರ್ಮಾಣಕ್ಕೆ 1 ಕೋ.ರೂ. ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನೇತ್ರಾವತಿ ಸೇತುವೆಯಿಂದ ಕಣ್ಣೂರಿಗೆ ರಸ್ತೆ ನಿರ್ಮಾಣಕ್ಕಾಗಿ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದು ಹೆದ್ದಾರಿಗೆ ಪರ್ಯಾಯ ರಸ್ತೆಯಾಗಿ ರೂಪುಗೊಳ್ಳಲಿದೆ. ವಾಹನಗಳ ಓಡಾಟಕ್ಕೂ ಉಪಯೋಗವಾಗಲಿದೆ. ಇದರಲ್ಲಿ ಸೈಕಲ್ ಟ್ರ್ಯಾಕ್ ಕೂಡಾ ಮಾಡಲಾಗುವುದು ಎಂದು ಲೋಬೊ ನುಡಿದರು.
ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಪ್ರಕಾಶ್ ಭಟ್, ಪದ್ಮನಾಭ್ ರೈ, ಕೇಶವ ಅಂಗಡಿಮಾರ್, ಪ್ರಭಾಕರ್ ಶ್ರೀಯಾನ್, ರಾಮಚಂದ್ರ ಆಳ್ವ, ಶೇಷಮ್ಮ, ಶಶಿಧರ್, ಎನ್.ಜೆ. ನಾಗೇಶ್, ಶಾಸ್ತ್ರಿ, ಕೃತಿನ್ ಕುಮಾರ್, ಮನೋಜ್ ಕುಮಾರ್ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.