ಹಝ್ರತ್ ಸಾದಾತ್ ವೃದ್ಧಾಶ್ರಮ ಉದ್ಘಾಟನೆ
ಕಾಪು, ಡಿ.19: ಕೆರೆಕಾಡು ಸಾದಾತ್ ವಲೀ(ಖ.ಸಿ) ಝೀಕ್‌ರ್ ಸ್ವಲಾತ್ ಮಜ್ಲಿಸ್ ಟ್ರಸ್ಟ್ ಕೆರೆಕಾಡು ಇವರ ಅಧೀನದಲ್ಲಿ ಮಲ್ಲಾರು ಕೋಟೆ ದರ್ಗಾ ಶರೀಫ್ ಸಮೀಪದಲ್ಲಿ ಸಾದತ್ ವಲ್ಲಿಯುಲ್ಲಾಹಿ ಹೆಸರಿನಲ್ಲಿ ನಿರ್ಮಿಸಲಾಗಿರುವ ಹಝ್ರತ್ ಸಾಧಾತ್ ವೃದ್ಧಾಶ್ರಮ ಮತ್ತು ಮಜ್ಲಿಸುನ್ನೂರ್ ಇದರ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಮೂಳೂರು ಅಬ್ದುಲ್ ಜಬ್ಬಾರ್ ಮಸ್ತಾನ್ ಉಪ್ಪಾಪ ನೇತೃತ್ವದಲ್ಲಿ ಅಸ್ಸೆಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಜ್ಞಳ್ ಪಾಣಕ್ಕಾಡ್ ನೂತನ ವೃದ್ಧಾಶ್ರಮವನ್ನು ಉದ್ಘಾಟಿಸಿ, ದುವಾ ನೆರವೇರಿಸಿದರು.
ಉಪ್ಪಳ ಮಣ್ಣಂಗುಯಿ ಮುದರ್ರಿನ ಬಿ.ಕೆ.ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ನೇತೃತ್ವದಲ್ಲಿ ಮಜ್ಲಿಸೂನ್ನೂರು ಕಾರ್ಯಕ್ರಮ ಜರಗಿತು.
ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು.
ಮಾಲೂರು ದರ್ಗಾಶರೀಪ್‌ನ ಮುಜಾವರ ಮುನೀರ್ ಸಾಹೇಬ್ ಮಾಲೂರು, ಸಾದತ್ ವಲಿ ಝಿಕ್ರ್ ಮಜ್ಲಿಸ್‌ನ ಗೌರವಾಧ್ಯಕ್ಷ ಎಂ.ಕೆ. ಕೋಯಾಲಿ, ಕೆರೆಕಾಡು ಮದರಸಾದ ಮುಅಲ್ಲಿಂ ಖಾಸಿಂ ಮುಸ್ಲಿಯಾರ್, ಉದ್ಯಾವರ ಖಾದಿಂ ದರ್ಗಾ ಶರೀಪ್‌ನ ಝುಹೂರ್ ಅಹಮದ್ ಷ, ಮೂಳೂರು ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಚ್.ಬಿ.ಮಹಮ್ಮದ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ.ನಾರಾಯಣ್, ಉದ್ಯಾವರ ದರ್ಗಾ ಕಮಿಟಿಯ ಅಧ್ಯಕ್ಷ ಮುಕ್ತಾರ್ ಅಹಮದ್, ಕೋಟೆ ಮಲ್ಲಾರ್ ದರ್ಗಾದ ಕೀಝರ್ ಅಹಮದ್, ವೇಣೂರು ಶ್ರೆಗುರು ಚೈತನ್ಯ ಸೇವಾ ಶ್ರಮದ ಸ್ಥಾಪಕಾಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ, ದ.ಕ. ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್, ಅಮೀರ್ ಹಂಝ ಕಾಪು, ಪೊಲಿಪು ಮಸೀದಿಯ ಅಧ್ಯಕ್ಷ ಎಚ್. ಮಹಮ್ಮದ್ ಮೊದ ಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಇಕ್ಭಾಲ್ ಬಾಳಿಲ ಸ್ವಾಗತಿಸಿದರು.
ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ. ಮುಹಮ್ಮದ್ ವಂದಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.