ತೊಕ್ಕೊಟ್ಟು: ಕಸದ ರಾಶಿಗೆ ಬೆಂಕಿ, ತಪ್ಪಿದ ಅನಾಹುತ

Update: 2016-12-19 16:06 GMT

ಉಳ್ಳಾಲ , ಡಿ.19 : ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿ ನಡೆಸುವ ಪೌರಕಾರ್ಮಿಕರು ವಾಣಿಜ್ಯ ಕಟ್ಟಡ ಸಮೀಪ ಕಸವನ್ನು ರಾಶಿ ಹಾಕಿ ಬೆಂಕಿ ಇಟ್ಟ ಪರಿಣಾಮ ಬೆಂಕಿಯು ತೀವ್ರತೆಯನ್ನು ಪಡೆದ ಪರಿಣಾಮ ಬಳಿಕ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ.

ತೊಕ್ಕೊಟ್ಟು ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪ್ರಶಾಂತ್ ವೈನ್ಸ್ ಪಕ್ಕದಲ್ಲೇ ಸೋಮವಾರ ಮುಂಜಾನೆ ಕಸ ವಿಲೇವಾರಿ ನಡೆಸಲು ಲಾರಿಯಲ್ಲಿ ಬಂದ ಪೌರಕಾರ್ಮಿಕರು ಕಸವನ್ನು ಲಾರಿಗೆ ಎತ್ತದೆ ಅಲ್ಲೇ ರಾಶಿ ಹಾಕಿ ಬೆಂಕಿ ಹಾಕಿದ್ದರು. ಬೆಳಗ್ಗೆ ಸುಮಾರು 9 ಗಂಟೆಗೆ ಪ್ರಶಾಂತ್ ವೈನ್ಸ್ ಬಾಗಿಲು ತೆರೆಯಲು ಬಂದ ಮಾಲಕರು ಬೆಂಕಿಯ ಕೆನ್ನಾಲಿಗೆಯು ತಮ್ಮ ಅಂಗಡಿಗಳಿಗೆ ಆಕ್ರಮಿಸುತ್ತಿರುವುದನ್ನು ಕಂಡು ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಕಾನ್‌ಸ್ಟೇಬಲ್ ಚಂದ್ರನಾಯ್ಕಾ ಅವರು ತಕ್ಷಣ ಅಗ್ನಿಶಾಮಕದಳಕ್ಕೆ ಕರೆ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News